Advertisement

ಗ್ರಾಮ ಸ್ವರಾಜ್‌ ಅಭಿಯಾನ ಮುನ್ನಡೆ

07:00 AM Apr 15, 2018 | Team Udayavani |

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ರೂಪಿಸಿರುವ ನಾನಾ ಯೋಜನೆಗಳ ಬಗ್ಗೆ ಹಳ್ಳಿಗಳಲ್ಲಿರುವ ಎಸ್ಸಿ, ಎಸ್ಟಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದಾಗಿ, ಕೇಂದ್ರ ಸರಕಾರ ಆಯೋಜಿಸಿರುವ “ಗ್ರಾಮ ಸ್ವರಾಜ್‌ ಅಭಿಯಾನ’ ದೇಶದೆಲ್ಲೆಡೆ ಆರಂಭವಾಗಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಕೇಂದ್ರ ಸರಕಾರದ ಸುಮಾರು ಒಂದು ಸಾವಿರ ಅಧಿಕಾರಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿಯೂ ಇದಕ್ಕೆ ಸಾಥ್‌ ನೀಡಿದೆ.

Advertisement

ಮೇ 8ರೊಳಗೆ 26 ರಾಜ್ಯಗಳ 20,844 ಹಳ್ಳಿಗಳನ್ನು ಯಶಸ್ವಿಯಾಗಿ ತಲುಪುವ ಗುರಿ ಹೊಂದಿರುವ ಈ ಯೋಜನೆಯಿಂದ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳವನ್ನು ಹೊರಗಿಡಲಾಗಿದೆ.  ಈ ವಿಶೇಷ ಅಭಿಯಾನದ ರೂಪು ರೇಷೆಗಳನ್ನು ಕೇಂದ್ರ ಸಂಪುಟದ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಸಿನ್ಹಾ ವಿನ್ಯಾಸಗೊಳಿಸಿದ್ದು, 2011ರ ಜನಗಣತಿಯ ಪ್ರಕಾರ, ಯಾವ ಗ್ರಾಮಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಎಸ್ಸಿ, ಎಸ್ಟಿ ಜನಸಂಖ್ಯೆ ಇರುವುದೋ ಆ ಹಳ್ಳಿಗಳಿಗೆ ಈ ಅಭಿಯಾನದ ವೇಳೆ ಮೊದಲ ಆದ್ಯತೆ ನೀಡಲಾಗಿದೆ.

ಅಭಿಯಾನದ ಹೈಲೈಟ್ಸ್‌
ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಸಿನ್ಹಾ ಸಿದ್ಧಗೊಳಿಸಿರುವ ರೂಪುರೇಷೆಗಳಂತೆಯೇ ಅಭಿಯಾನ. 
ಉಜ್ವಲ, ಸೌಭಾಗ್ಯ, ಜನ ಧನ್‌, ಮಿಷನ್‌ ಇಂದ್ರಧನುಷ್‌, ಜೀವನ್‌ ಜ್ಯೋತಿ ಭೀಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು. 
ಚುನಾವಣೆ ಹೊಸ್ತಿಲಲ್ಲಿರುವ ಬಂಗಾಳ, ಕರ್ನಾಟಕದಲ್ಲಿ ಈ ಅಭಿಯಾನವಿಲ್ಲ. 
ಅಭಿಯಾನ ನಡೆಯಲಿರುವ 26 ರಾಜ್ಯಗಳ ಪ್ರತಿಯೊಂದು ಜಿಲ್ಲಾ ಕೇಂದ್ರದ ಉಪ ನಿರ್ದೇಶಕರು ಅಥವಾ ಇಲಾಖಾ ಕಾರ್ಯದರ್ಶಿಗೆ ಅಭಿಯಾನದ ಹೊಣೆ.

50% ಗ್ರಾಮಗಳಲ್ಲಿ, ಜಿಲ್ಲೆಗಳಲ್ಲಿನ ಜನಸಂಖ್ಯೆಯಲ್ಲಿ ಎಸ್ಸಿ, ಎಸ್ಟಿಗಳ ಪ್ರಮಾಣ (2011ರ ಜನಗಣತಿ ಪ್ರಕಾರ) 
1000 ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿರುವ ಕೇಂದ್ರ ಸರಕಾರದ ಅಧಿಕಾರಿಗಳ ಸಂಖ್ಯೆ
21048 ಅಭಿಯಾನ ನಡೆಯಲಿರುವ ಗ್ರಾಮಗಳ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next