Advertisement

ದೂರಿನ ಬಳಿಕ ಗ್ರಾ.ಪಂ. ಕಾರ್ಯಾಚರಣೆ, ದಂಡ

10:54 AM Sep 07, 2018 | Team Udayavani |

ಉಪ್ಪಿನಂಗಡಿ: ಬಸ್‌ ನಿಲ್ದಾಣದ ಅನಧಿಕೃತ ವಾಹನ ಪಾರ್ಕಿಂಗ್‌ಗೆ ಸಂಬಂಧ ಪಟ್ಟಂತೆ ತಲೆದೋರಿದ್ದ ಸಮಸ್ಯೆ ಕುರಿತು ಸಲ್ಲಿಕೆಯಾದ ವ್ಯಾಪಕ ದೂರಿನ ಮೇರೆಗೆ ಗುರುವಾರ ಕಾರ್ಯಚರಣೆ ಮೂಲಕ ವಾಹನ ಮುಟ್ಟುಗೋಲು ಹಾಕಲಾಯಿತು. ವಾಹನ ಮಾಲೀಕರಿಗೆ ದಂಡ ವಿಧಿಸಿ ವಾಹನ ಹಸ್ತಾಂತರಿಸಿದ ಘಟನೆ ನಡೆದಿದೆ.

Advertisement

ಇಲ್ಲಿನ ಬಸ್‌ ನಿಲ್ದಾಣವು ಪಂಚಾಯತ್‌ ವ್ಯಾಪ್ತಿಗೆ ಸೇರಿದ್ದಾಗಿದ್ದು, ಬಸ್‌ ನಿಲುಗಡೆ ಮಾಡುವಲ್ಲಿ ದ್ವಿಚಕ್ರ ಹಾಗೂ ಲಘು ವಾಹನಗಳ ಬೇಕಾಬಿಟ್ಟಿ ಪಾರ್ಕಿಂಗ್‌ನಿಂದ ಬಸ್‌ಗಳು ನಿಲ್ದಾಣದಿಂದ ಹೊರಗಡೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಬಸ್‌ ಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ, ಇನ್ನೊಂದೆಡೆ ಬಸ್‌ಗಳು ನಿಲ್ಲುವ ಜಾಗದಲ್ಲಿ ಬೆಳಗ್ಗೆ ದ್ವಿಚಕ್ರ, ಲಘು ವಾಹನಗಳನ್ನು ನಿಲ್ಲಿಸಿ ರಾತ್ರಿ/ಸಂಜೆ ಮತ್ತೆ ಅಲ್ಲಿಂದ ತೆರಳುವುದು ಸಾಮಾನ್ಯವಾಗಿತ್ತು.

ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಇಂದು ಪಂಚಾಯತ್‌ ಅಧ್ಯಕ್ಷ ಕೆ. ಅಬ್ದುಲ್‌ ರಮಾನ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಆಸಫ್ ತಮ್ಮ ಕಚೇರಿ ಸಿಬಂದಿ ಇಸಾಕ್‌, ಶ್ರೀನಿವಾಸ್‌ ಇಕ್ಬಾಲ್‌ ಅವರನ್ನು ಒಳಗೊಂಡ ತಂಡ ದ್ವಿಚಕ್ರ ಹಾಗೂ ಲಘು ವಾಹನಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಬಳಿಕ ಬಂದ ವಾಹನ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವ ಮೂಲಕ ವ್ಯವಸ್ಥೆಯನ್ನು ಮನವರಿಕೆ ಮಾಡಿ ಬಸ್‌ಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಯಿತು.

ಕಠಿನ ಕ್ರಮ
ಇನ್ನು ಮುಂದೆ ಪಂಚಾಯತ್‌ ನಿಗಡಿಪಡಿಸಿದ ಜಾಗದ ಹೊರತುಪಡಿಸಿ ನಿಲ್ದಾಣದೊಳಗೆ ಪಾರ್ಕಿಂಗ್‌ ಮಾಡಿದ್ದಲ್ಲಿ ಪೊಲೀಸ್‌ ಇಲಾಖೆ ಮತ್ತು ಪ್ರಾದೇಶಿಕ ಇಲಾಖೆಯ ಸಹಕಾರದೊಂದಿಗೆ ಅಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ಯಾವುದೇ ಹಿಂದೇಟು ಹಾಕುವುದಿಲ್ಲ.
– ಅಬ್ದುಲ್ಲಾ ಆಸಫ್ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next