Advertisement
ಗ್ರಾಪಂ 18 ಜನ ಸದಸ್ಯರು ಬೆಳಗ್ಗೆ ಕಚೇರಿಗೆ ಆಗಮಿಸಿ, ಜಿಪಂ ಸಿಇಒ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಧರಣಿ ಆರಂಭಿಸಿದರು. 14ನೇ ಹಣಕಾಸು ಯೋಜನೆಯಡಿ ಗ್ರಾಪಂಗೆ ಬಂದ 40 ಲಕ್ಷ ರೂ. ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಇದರಲ್ಲಿ ಅಕ್ರಮವ್ಯವಹಾರ ನಡೆಸಲಾಗಿದೆ. ಸಿಬ್ಬಂದಿಗಳ ವೇತನಕ್ಕಾಗಿ ಬರುವ ಅನುದಾನವನ್ನೂ ಸಹ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಖರ್ಚು-ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಮಾಹಿತಿ ನೀಡುತ್ತಿಲ್ಲ.
ಚಳಕಾಪುರೆ, ವಿದ್ಯಾಸಾಗರ ಬನ್ಸೂಡೆ, ಜಗನ್ನಾಥ ಹಳಂಬ್ರೆ, ದಿಲೀಪ ರಂಗರಾವ್ ಜಾಧವ, ದೇವಿದಾಸ ಪವಾರ್, ಗುಲಾಮ ಮಹೇಬುಬಸಾಬ್, ಸಂಜು ವಗ್ಗೆ, ಎಜಾಜ್ ಅಜಿಮೋದಿನ್, ಖಾಯಾಮೋದಿನ್ ದಾವಲಜಿ, ಮೀರಾಬಾಯಿ ರಣಜಿತ್, ಶಕುಂತಲಾ ಗೌಂಡಗಾವೆ, ಕಲ್ಪನಾ ಸಂಜು ಮಾಳದೆ, ಸುರೇಖಾ ನಾಮದೇವ್ ವಾಗಮಾರೆ, ಝರಣಮ್ಮಾ ಶಿವಾಜಿ, ಸುನಿತಾ ವಗ್ಗೆ, ಸೈಜಾದಾಬೇಗಂ ಮಕ್ಕದುಮ್,
ಶಾಲುಬಾಯಿ ಧನಾಜಿ, ನಸಿಮಾಬೇಗಂ ಸಲಾಮೋದಿನ್ ಧರಣಿಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಅಲಿಸಾಬ್, ಪಿಎಸ್‌ಐ ಸುನೀಲಕುಮಾರ ಅವರು ಭದ್ರತೆ ಕಲ್ಪಿಸಿದರು.