ಗ್ರಾಮ ಪಂಚಾಯತ್‌ಗಳಿಗೆ ಪಕ್ಷರಹಿತವಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ. ಚುನಾವಣೆ ಮುಗಿದು ಮತ ಎಣಿಕೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಹೆಸರುಗಳನ್ನು ಜಿಲ್ಲಾಧಿಕಾರಿಗಳು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದ ಒಂದು ತಿಂಗಳ ಒಳಗಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸುವವರ ಅರ್ಹತೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
– ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ಮಾಡಲು 18 ವರ್ಷ ತುಂಬಿ ರಬೇಕು, ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬರು ಮತಚಲಾವಣೆಯ ಹಕ್ಕು ಹೊಂದಿ ರುತ್ತಾರೆ. ನಾಮಪತ್ರ ಸಲ್ಲಿಸುವ ಕೊನೇ ದಿನಾಂಕದವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಇತ್ಯಾದಿಗಳಿಗೆ ಅವಕಾಶವಿರುತ್ತದೆ.
– ಚುನಾವಣೆಗೆ ಸ್ಪರ್ಧಿಸಲು 21 ವರ್ಷ ತುಂಬಿರಬೇಕು. ಒಂದು ಗ್ರಾಮ ಪಂಚಾಯತ್‌ನ ಯಾವುದಾದರೂ ಕ್ಷೇತ್ರ/ವಾರ್ಡ್‌ನಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅವರ ಹೆಸರು ಆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಇರಬೇಕು.
– ಮೀಸಲು ಸ್ಥಾನದಲ್ಲಿ ಸ್ಪರ್ಧಿಸುವವರು, ಸ್ಪರ್ಧಿಸಬಯಸು ವವರು ಆಯಾ ಪ್ರವರ್ಗಕ್ಕೆ ಸೇರಿದ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪ್ರಮಾಣಪತ್ರವನ್ನು ನಾಮಪತ್ರದ ಜತೆಗೆ ಸಲ್ಲಿಸಬೇಕು.
– ಯಾರಾದರೂ ಯಾವುದಾದರೂ ನ್ಯಾಯಾಲಯದಿಂದ ಕ್ರಿಮಿ ನಲ್ ಪ್ರಕರಣದಲ್ಲಿ 3 ತಿಂಗಳಿಗೆ ಮೀರಿದ ಜೈಲು ಶಿಕ್ಷೆಗೆ ಒಳಗಾಗಿ, ಆ ಶಿಕ್ಷೆಯು ಮೇಲಿನ ನ್ಯಾಯಾಲಯದಲ್ಲಿ ವಜಾ ಆಗಿರದಿದ್ದರೆ ಅಂತಹವರು ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ. ಆದರೆ ವಿಚಾರಣಾಧೀನ ಕೈದಿಗಳಿಗೆ ಸ್ಪರ್ಧಿಸಲು ಅವಕಾಶವಿದೆ. ಹಿಂದಿನ ಯಾವುದಾದರೂ ಅವಧಿಯಲ್ಲಿ ಹಣ, ಅಧಿಕಾರದ ದುರ್ಬಳಕೆ, ಸೇವಾ ದುರ್ವರ್ತನೆ ಪ್ರಕರಣದಲ್ಲಿ ಸದಸ್ಯ ಸ್ಥಾನದಿಂದ 6 ವರ್ಷದ ಅವಧಿಗೆ ಅನರ್ಹಗೊಂಡು, ಆ ಅನರ್ಹತೆಯ ಅವಧಿ ಇನ್ನೂ ಮುಗಿಯದಿದ್ದರೆ, ಅಥವಾ ಅನರ್ಹತೆ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆ ಇಲ್ಲದಿದ್ದರೆ ಅಂಥವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ.
– ಕಾಯ್ದೆಯಲ್ಲಿ ವಿವರಿಸಿರುವಂತೆ ಯಾವುದಾದರೂ ಲಾಭದಾಯಕ ಹುದ್ದೆಯಲ್ಲಿದ್ದವರು, ಆ ಹುದ್ದೆಯಲ್ಲಿ ಮುಂದುವರಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಪತಿ ಸರಕಾರಿ ನೌಕರನಾಗಿದ್ದರೆ ಆತನ ಪತ್ನಿ ಚುನಾವಣೆಗೆ ಸ್ಪರ್ಧಿಸಬಹುದು. ಅದೇ ರೀತಿ ಪತ್ನಿ ಸರಕಾರಿ ಸೇವೆಯ ಲ್ಲಿದ್ದರೆ ಆಕೆಯ ಪತಿ ಚುನಾವಣೆಗೆ ಸ್ಪರ್ಧಿಸಬಹುದು.
ಎಂ.ಕೆ. ಕೆಂಪೇಗೌಡ ನಿವೃತ್ತ ನಿರ್ದೇಶಕರು, ಪಂಚಾಯತ್‌ರಾಜ್ ಇಲಾಖೆ