Advertisement
ಇಲ್ಲಿ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳು ಶೇ. 70 ರಷ್ಟಿದ್ದರೂ ಅದರ ಪಕ್ಕದಲ್ಲಿ ಚರಂಡಿಗಳ ಕೊರತೆ ಇದೆ. ಕೆಲವೆಡೆ ಚರಂಡಿಗಳಿದ್ದರೂ ಅದರಲ್ಲಿ ಕಸ ತುಂಬಿ, ಹುಲ್ಲುಗಳು ಬೆಳೆದು, ಹೂಳು ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ.
ಚುನಾವಣಾ ನೀತಿ ಸಂಹಿತೆಯಿಂದಾಗಿ ಗ್ರಾ.ಪಂ.ನ ಸಭೆಗಳು ನಡೆಯದಿದ್ದ ಕಾರಣ ಈ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಸ್ತಾವಿ ಸ ಲಾಗಲಿಲ್ಲ ಎಂದು ಗ್ರಾಮ ಪಂಚಾಯತ್ ಹೇಳುತ್ತಿದೆ. ಆದರೆ ಮಳೆಗಾಲದ ಸಮಸ್ಯೆ ಗಳಿಗೆ ತುರ್ತು ಪರಿಹಾರ ಕೈಗೊಳ್ಳಲು ಯಾವ ಸದಸ್ಯರು ಸಹ ವಿರೋಧಿಸುವುದಿಲ್ಲ. ಹೀಗಾಗಿ ಗ್ರಾಮ ಸಭೆ ನಡೆಯು ವವರೆಗೆ ಯಾಕೆ ಕಾಯಬೇಕು ಎನ್ನುವ ಗ್ರಾಮಸ್ಥರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Related Articles
ಚುನಾವಣಾ ನೀತಿ ಸಂಹಿತೆಯಿಂದ ಗ್ರಾಮ ಪಂಚಾಯತ್‌ನಲ್ಲಿ ಸಾಮಾನ್ಯ ಸಭೆಯು ನಡೆದಿಲ್ಲ. ಇಂದಿರಾನಗರ ಸಹಿತ ಹಲವೆಡೆ ಚರಂಡಿ ಹೂಳೆತ್ತಲು ಸಭೆಯ ನಿರ್ಣಯ ಅಗತ್ಯವಾಗಿಬೇಕಾಗಿದೆ. ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಮಳೆಗಾಲಕ್ಕೆ ಸರ್ವ ಸಿದ್ಧತೆ ನಡೆಸಲು ಉದ್ದೇಶಿಸಲಾಗಿದೆ.
– ಕೇಶವ ದೇವಾಡಿಗ,
ಪ್ರಭಾರ ಪಿಡಿಒ, ಹಳೆಯಂಗಡಿ
ಗ್ರಾ.ಪಂ.
Advertisement
ನರೇಂದ್ರ ಕೆರೆಕಾಡು