ಸವಣೂರು: ಹತ್ತಿಮತ್ತೂರ ಗ್ರಾಮದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಗ್ರಾಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.
ಜಾತ್ರಾ ಮಹೋತ್ಸವದ ಕೊನೆಯ ದಿನ ಶುಕ್ರವಾರ ದೇವಿಗೆ ಬುದಗಟ್ಟಿಯ ಶ್ರೀನಿವಾಸ ಶಿವಪೂಜಿ ಅವರಿಂದ ಪ್ರಾತಃಕಾಲ ಚಂಡಿಹೋಮ ಹವನಗಳೊಂದಿಗೆ ವಿಶೇಷ ಪೂಜೆ ಜರುಗಿತು.
ನಂತರ, ಮುತ್ತೈದೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯ, ದೇವಿಯ ಮುಂಭಾಗದಲ್ಲಿ ಜೋಳದ ರಾಶಿಗೆ ವಿಶೇಷ ಅಲಂಕಾರ ಮಾಡಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಆಸಾ(ರಾಣಿಗ್ಯಾ) ಅವರಿಂದ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಭಕ್ತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಸಮರ್ಪಕವಾಗಿ ಮಳೆ ಬೆಳೆ ಸಮೃದ್ಧವಾಗಿ ಬಂದು ರೈತರ ಸಂಕಷ್ಟಗಳನ್ನು ದೂರಮಾಡೆಂದು ದೇವಿಯಲ್ಲಿ ಪ್ರಾರ್ಥನೆ ಕೈಗೊಂಡರು.
Advertisement
ಜಾತ್ರಾ ಮಹೋತ್ಸವದ ಪ್ರಾರಂಭದಿಂದ ದೇವಿಗೆ ನಿತ್ಯ ಅಭಿಷೇಕ, ಹೊಮ ಹವನ, ವಿಶೇಷ ಅಲಂಕಾರ ಸೇರಿದಂತೆ ಪೂಜಾ ಕೈಂಕರ್ಯಗಳು ಜರುಗಿದವು.
Related Articles
Advertisement
ನಂತರ, ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು.