Advertisement

Graham Thorpe: ಇಂಗ್ಲೆಂಡ್‌ ಪರ 182 ಪಂದ್ಯವಾಡಿದ್ದ ದಿಗ್ಗಜ ಕ್ರಿಕೆಟರ್ ಇನ್ನಿಲ್ಲ

05:02 PM Aug 05, 2024 | Team Udayavani |

ಲಂಡನ್:‌ ಇಂಗ್ಲೆಂಡ್‌ ಮತ್ತು ಸರ್ರೆ ತಂಡದ ಪರ ಆಡಿದ್ದ ಮಾಜಿ ಕ್ರಿಕೆಟರ್‌ ಮತ್ತು ಕೋಚ್‌ ಗ್ರಹಾಂ ತೋರ್ಪ್ (Graham Thorpe) ಅವರು ಸೋಮವಾರ (ಆ.5) ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

Advertisement

1993ರಿಂದ 2005ರವರೆಗೆ ಇಂಗ್ಲೆಂಡ್‌ ಪರವಾಗಿ 100 ಟೆಸ್ಟ್‌ ಪಂದ್ಯವಾಡಿದ್ದ ತೋರ್ಪ್, ಬಳಿಕ ಬ್ಯಾಟಿಂಗ್‌ ಕೋಚ್‌ ಆಗಿ ಕೆಲಸ ಮಾಡಿದ್ದರು. 2022ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ತೋರ್ಪ್ ಆನಾರೋಗ್ಯಕ್ಕೆ ಒಳಗಾಗಿದ್ದರು.

ಟೆಸ್ಟ್‌ ವೃತ್ತಿ ಜೀವನದಲ್ಲಿ 6744 ರನ್‌ ಗಳಿಸಿದ್ದ ತೋರ್ಪ್ ಅವರು 16 ಶತಕಗಳನ್ನು ಬಾರಿಸಿದ್ದಾರೆ. ಅವರು ಇಂಗ್ಲೆಂಡ್‌ ಪರ 82 ಏಕದಿನ ಪಂದ್ಯಗಳಲ್ಲಿ ಆಡಿದ್ದರು. 1988ರಿಂದ 2005ರವರೆಗೆ ಸರ್ರೆ ಕೌಂಟಿ ಪರ ಆಡಿದ್ದ ತೋರ್ಪ್ 20 ಸಾವಿರ ರನ್‌ ಗಳಿಸಿದ್ದರು.

“ಇಂಗ್ಲೆಂಡ್‌ ನ ಉತ್ತಮ ಆಟಗಾರ ಮಾತ್ರವಲ್ಲದೆ ಅವರು ಕ್ರಿಕೆಟ್ ಕುಟುಂಬದ ಪ್ರೀತಿಯ ಸದಸ್ಯರಾಗಿದ್ದರು. ಅವರ ಕೌಶಲ್ಯ ಪ್ರಶ್ನಾತೀತ. 13 ವರ್ಷಗಳ ವೃತ್ತಿ ಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ನಂತರ ಇಂಗ್ಲಂಡ್‌ ತಂಡದ ತರಬೇತುದಾರನಾಗಿ ಹಲವು ಸರಣಿಗಳಲ್ಲಿ ಜಯ ಸಾಧಿಸಲು ನೆರವಾಗಿದ್ದರು” ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

1993ರಲ್ಲಿ ಟ್ರೆಂಟ್‌ ಬ್ರಿಡ್ಜ್‌ ನಲ್ಲಿ ನಡೆದ ಆಶಸ್‌ ನಲ್ಲಿ ಪದಾರ್ಪಣೆ ಮಾಡಿದ್ದ ಗ್ರಹಾಂ ತೋರ್ಪ್‌ ಅಂದು ಶತಕ ಬಾರಿಸಿ ಮಿಂಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next