Advertisement

ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಪದವೀಧರರು!

02:46 PM May 12, 2021 | Team Udayavani |

ಯಳಂದೂರು: ಉದ್ಯೋಗ ಖಾತ್ರಿ ಯೋಜನೆಕಾಮಗಾರಿಗಳಲ್ಲಿ ಸ್ನಾತಕೋತ್ತರ ಪದವೀಧರರು ಕೂಡಕೆಲಸದಲ್ಲಿ ತೊಡಗಿದ್ದಾರೆ. ಕೊರೊನಾ, ಲಾಕ್‌ಡೌನ್‌ಹಿನ್ನೆಲೆಯಲ್ಲಿ ಬಹುತೇಕ ವಲಯಗಳು ಸ್ಥಗಿತವಾಗಿರುವುದರಿಂದ ವಿದ್ಯಾವಂತರು ಕೂಲಿ ಕಾರ್ಮಿಕರಾಗಿದ್ದಾರೆ.

Advertisement

ತಾಲೂಕಿನ ಅಂಬಳೆ ಗ್ರಾಪಂ ವ್ಯಾಪ್ತಿಯ ವೈ.ಕೆ.ಮೋಳೆಗ್ರಾಮದಲ್ಲಿ ಇರಸವಾಡಿ ಕೆರೆ ಕೋಡಿ ಅಭಿವೃದ್ಧಿ ಪಡಿಸುವಕೆಲಸದಲ್ಲಿ ಗ್ರಾಮದ ಕೂಲಿ ಕಾರ್ಮಿಕರೊಂದಿಗೆಪದವೀಧರರು ತೊಡಗಿಕೊಂಡಿದ್ದಾರೆ. ನಿತ್ಯ 289 ರೂ.ಕೂಲಿ ಇವರಿಗೆ ಲಭಿಸುತ್ತಿದೆ. ಕೆರೆ ಕಾಲುವೆ ದುರಸ್ತಿಯಿಂದಈ ಭಾಗದ ರೈತರಿಗೆ ಅನುಕೂಲವಾಗಿದೆ ಎನ್ನುತ್ತಾರೆಪದವಿ ವಿದ್ಯಾರ್ಥಿ ದೊಡ್ಡರಾಜು.

“ನಾನು ಎಂ.ಎ ಪದವೀಧರನಾಗಿದ್ದೇನೆ. ಈ ಹಿಂದೆಹೊರಗೆ ಹೋಗಿ ಕೆಲಸ ಮಾಡುತ್ತಿದ್ದೆ. ನಮ್ಮ ಸಂಸಾರಸಾಗಿಸುವ ಹೊಣೆ ನನ್ನ ಮೇಲಿದೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲ. ಈಗ ನರೇಗಾ ಯೋಜನೆ ಕೆಲಸ ಮಾಡುತ್ತಿದ್ದು ಈ ಕೂಲಿಯಿಂದ ಸಂಸಾರ ಸಾಗಿಸಲು ಕೊಂಚ ಅನುಕೂಲವಾಗಿದೆ’ ಎಂದು ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next