Advertisement

ರಸ್ತೆ, ಚರಂಡಿ ಸರಿಪಡಿಸಲು ಗ್ರಾಮ ಸ್ಥರ ಆಗ್ರಹ

07:30 AM Aug 25, 2017 | |

ಮಡಂತ್ಯಾರು: ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸರಿಪಡಿಸಬೇಕೆಂದು ಮಾಲಾಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬುಧವಾರ ಮಾಲಾಡಿ ಗ್ರಾಮ ಪಂಚಾಯತ್‌ ಆವರಣದಲ್ಲಿ ಜರಗಿದ ಅಧ್ಯಕ್ಷ ಬೇಬಿ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಚರಂಡಿ ಮತ್ತು ರಸ್ತೆ ದುರವಸ್ಥೆ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇದಕ್ಕೆ ಉತ್ತರಿಸಿದ ಜಿಲ್ಲಾ ಪಂ.ಸದಸ್ಯೆ ಮಮತಾ ಶೆಟ್ಟಿ “ಇದು ಜಿ.ಪಂ.ರಸ್ತೆ. ಆದರೆ ನಮ್ಮಲ್ಲಿ ಅನುದಾನದ ಕೊರತೆ ಇದೆ. ಕೇಂದ್ರದ 13ನೇ ಹಣಕಾಸು ಪರಿವರ್ತನೆಯಾಗಿ 14ನೇ ಹಣಕಾಸು ಮೂಲಕ ಪಂಚಾಯತ್‌ಗೆ ನೀಡುತ್ತಿದ್ದು ಜಿಲ್ಲಾ ಪಂಚಾಯತ್‌ನಿಂದ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಶಾಸಕರ ಅನುದಾನದಲ್ಲಿ ಮಾಡಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

ಇದನ್ನು ವಿರೋಧಿಸಿದ ಗ್ರಾಮಸ್ಥರೊಬ್ಬರು “ಎಲ್ಲದಕ್ಕೂ ಶಾಸಕರ ಹೆಸರು ಹೇಳುತ್ತೀರಿ. ಸಂಸದರು ಮಾಲಾಡಿ ಗ್ರಾಮಕ್ಕೆ ಏನು ನೀಡಿದ್ದಾರೆ. ಅಳದಂಗಡಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆಗಿದೆ. ಮಾಲಾಡಿಯಲ್ಲಿ ಯಾಕೆ ಆಗಿಲ್ಲ’ ಎಂದು ಪ್ರಶ್ನಿಸಿದರು. ಮುಂದೆ ಹೆಚ್ಚಿನ ಅನುದಾನ ಬಂದರೆ ಅಭಿವೃದ್ಧಿ ಕಾಮಗಾರಿ ನಡೆಸುವುದಾಗಿ ಜಿ.ಪಂ.ಸದಸ್ಯೆ ಭರವಸೆ ನೀಡಿದರು.

ಆಟೋ ಪಾರ್ಕಿಂಗ್‌ ಅವ್ಯವಸ್ಥೆ  
ಮಡಂತ್ಯಾರು ಸೇವಾ ಸಹಕಾರಿ ಬ್ಯಾಂಕ್‌ನ ಮುಂಭಾಗದಲ್ಲಿ ಆಟೋ ಚಾಲಕರಿಗೆ ಪಾರ್ಕಿಂಗ್‌ ವ್ಯವಸ್ಥೆ  ಮಾಡಲಾಗಿದೆ. ರಸ್ತೆ ಬದಿ ಚರಂಡಿ ಇಲ್ಲದೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ವಿದ್ಯುತ್‌ ಸಂಪರ್ಕ ಕಡಿತ 
ಅಂಬೇಡ್ಕರ್‌ ಭವನದ ವಿದ್ಯುತ್‌ ಬಿಲ್‌ ಕಟ್ಟಲು ಬಾಕಿಯಾಗಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಕಾರ್ಯಕ್ರಮ ನಡೆಯಬೇಕಾದರೆ ಪಂಚಾಯತ್‌ಗೆ ಹಣ ಕಟ್ಟಬೇಕು. ಆದರೆ ಪಂಚಾಯತ್‌ ವಿದ್ಯುತ್‌ ಬಿಲ್‌ ಕಟ್ಟಲು ಹಿಂಜರಿಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

Advertisement

ಮಡಂತ್ಯಾರು – ಮಾಲಾಡಿಸುತ್ತಮುತ್ತ ಅಪಾಯಕಾರಿಯಾದ ಮರಗಳನ್ನು ತೆಗೆಯಬೇಕು ಎಂದು ನಿರ್ಣಯ ಮಾಡಲಾಗಿತ್ತು.ಆದರೆ ಇಲಾಖೆಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು. 

ರಸ್ತೆ ಮೇಲೆ ನೀರು
“ರಸ್ತೆಬದಿ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ನೀರು ರಸ್ತೆ ಮೇಲೆಯೆ ಹರಿದಾಡುತ್ತಿದ್ದು ರಸ್ತೆ ಹಾಳಾಗುತ್ತಿದೆ. ಕೊಲ್ಪೆದಬೈಲು-ಸೋಣಂದೂರು ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳು ಹಲವು ಕಳೆದವು. ಪ್ರತೀ ಗ್ರಾಮಸಭೆಯಲ್ಲೂ  ಗ್ರಾಮಸ್ಥರು ಬೇಡಿಕೆ ಇಡುವುದು,  ನಿರ್ಣಯ ಮಾಡುವುದು ಮಾತ್ರ ಆಗುತ್ತಿದೆ ಹೊರತು ಪ್ರಗತಿ ಕಾಣುತ್ತಿಲ್ಲ. ಸೂಕ್ತ ಪರಿಹಾರ ಕಲ್ಪಿಸಿ’ ಎಂದು ಗ್ರಾಮಸ್ಥರು ಹೇಳಿದರು.

ಮರ ತೆರವಿಗೆ ನಿರ್ಣಯ 
ಮುಖ್ಯರಸ್ತೆಯಲ್ಲಿರುವ ವಿದ್ಯುತ್‌ ತಂತಿಗಳು ಹೈಟೆನÒನ್‌ ಆದ  ಕಾರಣ ಹೆಚ್ಚು ಸಿಬಂದಿ ಬೇಕು. ಅರಣ್ಯ ಇಲಾಖೆ ಎಸ್ಟಿಮೇಟ್‌ ಕೇಳಿಲ್ಲ  ನಾವು ಎಸ್ಟಿಮೇಟ್‌ ಮಾಡಿಕೊಡಲು ಸಿದ್ದ ಎಂದು ಮೆಸ್ಕಾಂ ಅಧಿಕಾರಿ ಉತ್ತರಿಸಿದರು. ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಜಂಟಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೋಡಲ್‌ ಅಧಿಕಾರಿ ರತ್ನಾಕರ ಮಲ್ಯ ಆದೇಶ ಮಾಡಿದರು. ಮಡಂತ್ಯಾರು ಪೇಟೆಯ ಮರ ತೆಗೆಯಲು ನಿರ್ಣಯ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next