Advertisement
ಇದರೊಂದಿಗೆ ನಮ್ಮ ಮೆಟ್ರೋ ಸೇವೆಯನ್ನು ಉತ್ತರ ಭಾಗಕ್ಕೆ ಇನ್ನಷ್ಟು ವಿಸ್ತರಿಸಲು ಮುಂದಾಗಿದ್ದು, ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಒತ್ತು ನೀಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದ್ದು, 2018-19ನೇ ಸಾಲಿನಲ್ಲಿ 150 ಕಿ.ಮೀ. ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಸರ್ಕಾರ ಘೋಷಿಸಿದೆ.
Related Articles
Advertisement
ಇನ್ನು, ಲೋಕೋಪಯೋಗಿ ಇಲಾಖೆಯಿಂದಲೂ 32 ಕೋಟಿ ರೂ. ವೆಚ್ಚದಲ್ಲಿ ಬಿಡದಿ-ಹಾರೋಹಳ್ಳಿ ರಸ್ತೆ ಅಗಲೀಕರಣ ಹಾಗೂ ನಗರದ ಎಂ.ಎಸ್.ಬಿಲ್ಡಿಂಗ್ ಬಳಿ 20 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಪಾರ್ಕಿಂಗ್ ತಾಣ ಮತ್ತು ಸಾರಿಗೆ ಇಲಾಖೆಯಿಂದ 40 ಕೋಟಿ ರೂ. ವೆಚ್ಚದಲ್ಲಿ ಯಶವಂತಪುರ ಟ್ರಕ್ ಟರ್ಮಿನಲ್‌ನಲ್ಲಿ ಬಹುಮಹಡಿ ಪಾರ್ಕಿಂಗ್ ತಾಣ ನಿರ್ಮಿಸುವುದಾಗಿ ತಿಳಿಸಿದ್ದಾರೆ.
3ನೇ ಹಂತದಲ್ಲಿ “ನಮ್ಮ ಮೆಟ್ರೋ’ ಇನ್ನಷ್ಟು ವಿಸ್ತಾರ: ನಗರದ ಪ್ರಮುಖ ರಸ್ತೆಗಳಿಗೆ ಮೀಸಲಾಗಿರುವ “ನಮ್ಮ ಮೆಟ್ರೋ’ ಉಪ ಪ್ರಮುಖ ರಸ್ತೆಗಳಿಗೂ ತನ್ನ ಜಾಲವನ್ನು ವಿಸ್ತರಿಸಲಿದೆ. ಈ ಸಂಬಂಧ ಸಮಗ್ರ ಯೋಜನಾ ವರದಿಗೆ ಸರ್ಕಾರ ಮುಂದಾಗಿದೆ. 2018-19ನೇ ಸಾಲಿನ ಬಜೆಟ್‌ನಲ್ಲಿ ಮೆಟ್ರೋ ಮೂರನೇ ಹಂತದ ಯೋಜನೆಗೆ ಡಿಪಿಆರ್ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ. ಈ ಹಂತದಲ್ಲಿ ಮೆಟ್ರೋ ರೈಲು ನಗರದ ಉಪ ಪ್ರಮುಖ ರಸ್ತೆಗಳಲ್ಲೂ ಹಾದುಹೋಗಲಿದೆ.
ಜೆ.ಪಿ.ನಗರ-ಹೆಬ್ಟಾಳ-ಕೆ.ಆರ್. ಪುರ, ವಿಜಯನಗರದ ಟೋಲ್‌ಗೇಟ್-ಕಡಬಗೆರೆ, ಗೊಟ್ಟಿಗೆರೆ-ಬಸವಾಪುರ, ಆರ್.ಕೆ. ಹೆಗಡೆ ನಗರ-ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್-ರಾಜಾನುಕುಂಟೆ, ಬೊಮ್ಮಸಂದ್ರ- ಅತ್ತಿಬೆಲೆ ಮತ್ತು ಇಬಲೂರಿನಿಂದ ಕರ್ಮಲ್‌ರಾವ್ ಮಾರ್ಗಗಳು ಸೇರಿದಂತೆ ಮೂರನೇ ಹಂತದಲ್ಲಿ 105.55 ಕಿ.ಮೀ. ಉದ್ದದಲ್ಲಿ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದರಿಂದ ನಗರದಲ್ಲಿ ಒಟ್ಟಾರೆ 266 ಕಿ.ಮೀ. ಉದ್ದದಲ್ಲಿ ಮೆಟ್ರೋ ವಿಸ್ತಾರಗೊಂಡಂತಾಗಲಿದೆ.
2021ಕ್ಕೆ 2ನೇ ಹಂತ ಪೂರ್ಣ: ಬಹುನಿರೀಕ್ಷಿತ ಮೆಟ್ರೋ ಎರಡನೇ ಹಂತವು 2021ಕ್ಕೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದೂ ಬಜೆಟ್‌ನಲ್ಲಿ ಘೋಷಿಸಲಾಗಿದೆ. 26,405.14 ಕೋಟಿ ವೆಚ್ಚದಲ್ಲಿ 72.09 ಕಿ.ಮೀ. ಉದ್ದದ ಈ ಕಾಮಗಾರಿಯನ್ನು ಈಗಾಗಲೇ ಕೈಗೆ ತ್ತಿಕೊಳ್ಳಲಾಗಿದ್ದು, ನಾಲ್ಕು ವಿಸ್ತರಿಸಿದ ಮತ್ತು ಎರಡು ಹೊಸ ಮಾರ್ಗಗಳು ಈ ಯೋಜನೆ ಅಡಿ ಬರಲಿವೆ.
ಇದಲ್ಲದೆ, ಹಂತ 2ಎ ಅಡಿ 4,202 ಕೋಟಿ ರೂ.ಗಳಲ್ಲಿ 17 ಕಿ.ಮೀ. ಉದ್ದದ ಸೆಂಟ್ರಲ್ ಸಿಲ್ಕ್ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರ ನಡುವೆ ಮತ್ತು ಹಂತ 2ಬಿ ಅಡಿ 5,950 ಕೋಟಿ ವೆಚ್ಚದಲ್ಲಿ 29.06 ಕಿ.ಮೀ. ಉದ್ದದ ನಾಗವಾರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆಯೂ ಮೆಟ್ರೋ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಇನ್ನು ಮೊದಲ ಹಂತದ ಯೋಜನೆ ಈ ಮೊದಲೇ ಅನುಷ್ಠಾನಗೊಂಡಿದ್ದು, 42.03 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ನಿತ್ಯ ಮೂರೂವರೆ ಲಕ್ಷ ಜನ ಸಂಚರಿಸುತ್ತಿದ್ದಾರೆ.
ಕೆ.ಸಿ.ಜನರಲ್ ಆಸ್ಪತ್ರೆ ನವೀಕರಣಕ್ಕೆ ಕ್ರಮ: ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯ 500 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 500 ಕೋಟಿ ರೂ. ಸೇರಿಸಿ ಕ್ರಿಯಾಯೋಜನೆ ಅಂತಿಮಗೊಳಿಸಲಾಗಿದೆ. ಅದರಂತೆ ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ, ಐತಿಹಾಸಿಕ ವಾಣಿಜ್ಯ ಕೇಂದ್ರವಾದ ಕೆ.ಆರ್.ಮಾರುಕಟ್ಟೆ ಪ್ರದೇಶದ ಪುನಶ್ಚೇತನ, ಶಿವಾಜಿನಗರ ಸಂಯೋಜಿತ ಸಂಚಾರಿ ಕೇಂದ್ರ, ಕಬ್ಬನ್ ಉದ್ಯಾನ, ಸ್ವತಂತ್ರಪಾಳ್ಯ ಕೊಳಗೇರಿ, ಹಲಸೂರು ಹಾಗೂ ಸ್ಯಾಂಕಿ ಕೆರೆಗಳ ಅಭಿವೃದ್ಧಿ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆ ನವೀಕರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
14 ರಸ್ತೆಗಳ ಅಭಿವೃದ್ಧಿ: ವೈಟ್‌ಫೀಲ್ಡ್ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯಿಂದ ಆಗುತ್ತಿರುವ ತೀವ್ರ ವಾಹನ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಐಟಿಪಿಎಲ್‌ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸ ಲಾಗಿದೆ. ಜತೆ ಜೊತೆಗೆ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ರಸ್ತೆ ಗಳನ್ನೂ ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಿದೆ.
ಬೆಂಗಳೂರು ನಗರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಮೆಟ್ರೋ ಮೂರನೇ ಹಂತ ವಿಸ್ತರಣೆ ನಗರದ ನಾಗರಿಕ ಪಾಲಿಗೆ ಸಂತಸದ ಸುದ್ದಿ. ಒಟ್ಟಾರೆ ಇದೊಂದು ಜನಪ್ರಿಯ ಹಾಗೂ ಜನಪರ ಬಜೆಟ್.-ಜಮೀರ್ ಅಹಮದ್, ಜೆಡಿಎಸ್ ಬಂಡಾಯ ಶಾಸಕ ಹಿಂದಿನ ವರ್ಷಗಳಲ್ಲಿ ಬಜೆಟ್ ಘೋಷಣೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾದ ಸರ್ಕಾರ ಅನಗತ್ಯವಾಗಿ ಮತ್ತೂಂದು ಬಜೆಟ್ ಮಂಡಿಸಿದೆ. ಬಜೆಟ್ ಬದಲು ಲೇಖಾನುದಾನ ಮಂಡಿಸಿದರೆ ಸಾಕಿತ್ತು.
-ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ ರಾಜ್ಯ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ಮುಂದೆ ಹೊಸ ಸರ್ಕಾರ ಬಂದಾಗ ಮತ್ತೆ ಹೊಸ ಬಜೆಟ್ ಮಂಡಿಸಲಿದೆ. ಹೀಗಾಗಿ, ಈ ಬಜೆಟ್‌ಗೆ ಯಾವುದೇ ಮಹತ್ವವಿಲ್ಲ. ಕಾಟಾಚಾರಕ್ಕೆ ಬಜೆಟ್ ಮಂಡಿಸಿದಂತಿದೆ.
-ಜಿ.ರಾಮರಾಜು, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಮಹಿಳೆ ಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತಾದರೂ ಆ ಕೆಲಸ ಆಗಿಲ್ಲ. ತಾಂಡಾ ಮಹಿಳೆಯರನ್ನು ಕಡೆಗಣಿಸಲಾ ಗಿದ್ದು, ಸೆಕ್ಸ್ ವರ್ಕರ್‌ಗಳನ್ನು ಸಂಪೂರ್ಣ ಮರೆಯಲಾಗಿದೆ.
-ಕೆ.ನೀಳಾ, ಮಹಿಳಾ ಪರ ಹೋರಾಟಗಾರ್ತಿ ಸಿದ್ದರಾಮಯ್ಯ ಅವರು ತಾಂತ್ರಿಕ ಕಾರಣಗಳಿಗಾಗಿ ಆಯವ್ಯಯ ಮಂಡಿಸಿದ್ದಾರೆ. ಬರೀ ಅಂಕಿ-ಸಂಖ್ಯೆಗಳಲ್ಲಿ ಜನರನ್ನು ತೃಪ್ತಿಪಡಿಸುವ ಕೆಲಸ ಮಾಡಿದ್ದಾರೆ.
-ರಮೇಶ್‌ಬಾಬು, ಜೆಡಿಎಸ್ ವಿಧಾನಪರಿಷತ್ ಸದಸ್ಯ 2 ವರ್ಷಗಳಲ್ಲಿ ಬಿಬಿಎಂಪಿಗೆ 9 ಸಾವಿರ ಕೋಟಿಗೂ ಹೆಚ್ಚು ಅನುದಾನ ಘೋಷಿಸಿದ್ದಾರೆ. ಆದರೆ, ಬಿಡುಗಡೆಯಾಗಿರುವುದು 3 ಸಾವಿರ ಕೋಟಿ ಮಾತ್ರ. ಈ ಮೂಲಕ ನಾಗರಿಕರಿಗೆ ಮೋಸ ಮಾಡುತ್ತಿದ್ದಾರೆ.
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ, ಬಿಬಿಎಂಪಿ ಪಾಲಿಕೆಯಿಂದ ಕೋರಲಾಗಿದ್ದ ಅನುದಾನವನ್ನು ಸಿಎಂ ಒದಗಿಸಿಕೊಟ್ಟಿದ್ದಾರೆ. ಇದರಿಂದಾಗಿ ನಗರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
-ಆರ್.ಸಂಪತ್‌ರಾಜ್, ಮೇಯರ್ ಹಿಂದಿನ ಬಜೆಟ್‌ನಲ್ಲಿ ಪಾಲಿಕೆಗೆ ಘೋಷಿಸಿದ್ದ ಹಣದಲ್ಲಿನ ಬಾಕಿ ಬಗ್ಗೆ ಬಜೆಟ್ ಬುಕ್‌ನಲ್ಲಿ ಉಲ್ಲೇಖೀಸಿಲಿಲ್ಲ. ಇದರಿಂದ ಎಷ್ಟು ಅನುಕೂಲ ಆಗುತ್ತದೆ ಎಂಬುದು ನೋಡಬೇಕಿದೆ. ಪಾಲಿಕೆಗೆ ಹೊರೆಯಾಗಲಿದೆ.
-ನೇತ್ರಾ ನಾರಾಯಣ್, ಜೆಡಿಎಸ್ ನಾಯಕಿ, ಬಿಬಿಎಂಪಿ ನಗರದ ಮೂಲಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದ್ದು, ರಸ್ತೆಗಳು, ಕೆರೆಗಳು ಹಾಗೂ 110 ಹಳ್ಳಿಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಜತೆಗೆ ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಆದ್ಯತೆ ನೀಡಲಾಗಿದೆ.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ, ಬಿಬಿಎಂಪಿ ಈ ಬಜೆಟ್ ಜನಪ್ರಿಯವೂ ಹೌದು. ಜನಾಮುಖೀಯು ಹೌದು. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡ ಬಜೆಟ್ ಇದು ಅಲ್ಲ ಅನಿಸುತ್ತದೆ. ಎಲ್ಲಾ ವಲಯಕ್ಕೂ ಆದ್ಯತೆ ನೀಡಲಾಗಿದೆ.
-ಡಾ. ಹಂಪ ನಾಗರಾಜಯ್ಯ, ಹಿರಿಯ ಸಾಹಿತಿ ಆರನೇ ವೇತನ ಆಯೋಗದ ಮೊದಲನೇ ವರದಿಯಲ್ಲಿ ಆಗಿರುವ ನ್ಯೂನತೆಗಳನ್ನು ಎರಡನೇ ವರದಿಯಲ್ಲಿ ಸರಿಪಡಿಸಬೇಕೆಂಬುದು ನಮ್ಮ ಒತ್ತಾಯ.
-ಬಿ.ಪಿ. ಮಂಜೇಗೌಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪರಿಸರ ಸ್ನೇಹಿ ವಾತಾವರಣಕ್ಕಾಗಿ ಇ ಕಾರ್‌ಚಾರ್ಜಿಂಗ್ ಪಾಯಿಂಟ್ ಒದಗಿಸುವಂತೆ ಮನವಿ ಮಾಡಿದ್ದೆವು. ಅದರ ಪ್ರಸ್ತಾಪವೇ ಇಲ್ಲ. ಈ ಸರ್ಕಾರ -ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿಲ್ಲ.
-ಕೆ. ರಾಧಾಕೃಷ್ಣ ಹೊಳ್ಳ, ಪ್ರವಾಸಿ ವಾಹನ ಮಾಲಿಕರ ಸಂಘ