ಈ ಸಂದರ್ಭದಲ್ಲಿ ಮಾತನಾಡಿದ ಸಂಘ ಪರಿವಾರದ ಹಿರಿಯರಾದ ಅ.ಪು.ನಾರಾಯಣಪ್ಪ, ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕದ್ದೊಯ್ಯುವ ಜೊತೆಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಗೋವುಗಳನ್ನು ಸಹ ಅಕ್ರಮವಾಗಿ ಕದ್ದೊಯ್ಯಲಾಗುತ್ತಿದೆ. ಗೋಕಳ್ಳರನ್ನು ಹಿಡಿಯುವಂತೆ ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದಾಗಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ದೇಶದಲ್ಲಿ ಬಲವಂತದ ಮತಾಂತರ, ಲವ್ ಜಿಹಾದ್‌ನಂತಹ ಕೃತ್ಯಗಳು ಹೆಚ್ಚುತ್ತಿದೆ. ಇದರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಬಾಂಗ್ಲಾದಲ್ಲಿ ಶೇ. ೩೫ರಷ್ಟು ಹಿಂದೂಧರ್ಮಿಯರಿದ್ದಾರೆ. ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಿಂದೂಗಳ ರಕ್ಷಣೆಗೆ ಅಗತ್ಯಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
Advertisement
ಇದನ್ನೂ ಓದಿ;- ಸೋತವನ ವಿರುದ್ದವೇ ಶರಣಾಗಿದ್ದೀಯ: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರವೀಶ್ ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಇರುವ ಶಿಕಾರಿಪುರ ಕ್ಷೇತ್ರದಲ್ಲಿ ಹೆಚ್ಚಿನ ಗೋಹತ್ಯೆಯಾಗುತ್ತಿದೆ. ಇದರ ಬಗ್ಗೆ ಗಮನ ಹರಿಸಬೇಕು. ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಗೋಹತ್ಯೆ ಮತ್ತು ಗೋಕಳ್ಳ ಸಾಗಾಣಿಕೆ ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ನಗರಸಭೆಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಬಿಜೆಪಿ ಆಡಳಿತವಿದೆ.
ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಪ್ರಕಾಶ್ ಕುಂಠೆ ಮಾತನಾಡಿ, ನಗರವ್ಯಾಪ್ತಿಯಲ್ಲಿ ಗೋವು ಕಳ್ಳಸಾಗಾಣಿಕೆ ತಡೆಗಟ್ಟದೆ ಹೋದಲ್ಲಿ ಸಾಗರ್ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸುವುದು ಅನಿವಾಂiiವಾಗುತ್ತದೆ. ಹೆಚ್ಚುತ್ತಿರುವ ಗೋಕಳ್ಳ ಸಾಗಾಣಿಕೆ ಮತ್ತು ಗೋಹತ್ಯೆ ತಡೆಗಟ್ಟಲು ಸಾಧ್ಯವಾಗದೆ ಹೋದಲ್ಲಿ ಆಳುವವರು ಹಿಂದೂಧರ್ಮಿಯರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕಾಮತ್, ಭಜರಂಗ ದಳದ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ, ಪ್ರಮುಖರಾದ ಪ್ರತಿಮಾ ಜೋಗಿ, ಕೆ.ವಿ.ಪ್ರವೀಣ್, ಶ್ರೀಧರ್ ಸಾಗರ್, ಕಿರಣ್, ಮುರಳಿ ಮಂಚಾಲೆ, ಬಾಲಕೃಷ್ಣ ಗುಳೇದ್, ಕೋಮಲ್ ರಾಘವೇಂದ್ರ, ಅಶ್ವಿನಿ ಕಾಮತ್, ರವಿಕುಮಾರ್, ವಿರೂಪಾಕ್ಷ, ಲಕ್ಷ್ಮಣ್ ಮಾಗಡಿ ಇನ್ನಿತರರು ಹಾಜರಿದ್ದರು.