Advertisement

ತಾಲೂಕು ಹಸಿರೀಕರಣಕ್ಕೆ ಕೈಜೋಡಿಸಿ

07:50 PM Jun 05, 2021 | Team Udayavani |

ಗೌರಿಬಿದನೂರು: ತಾಲೂಕಿನಲ್ಲಿ ಸಸಿ ನೆಟ್ಟುಹಸಿರೀಕರಣ ಮಾಡಲು ತಾವೆಲ್ಲಮುಂದಾಗಬೇಕು. ಇದರಿಂದ ಉತ್ತಮ ಪರಿಸರ,ಆರೋಗ್ಯಕ್ಕೆ ಬೇಕಾದಷ್ಟು ಆಕ್ಸಿಜನ್‌ಲಭ್ಯವಾಗುತ್ತದೆ ಎಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರಸಭೆ ಕಚೇರಿ ಆವರಣದಲ್ಲಿ ಸಸಿ ವಿತರಣೆಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವಮಹತ್ವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ.ಕಳೆದ ವರ್ಷ ತಾಲೂಕಿನಲ್ಲಿ ಲಕ್ಷ ಸಸಿ ನೆಟ್ಟಿದ್ದು,ಅದರಲ್ಲಿ ಉತ್ತರ ಪಿನಾಕಿನ ನದಿಯ ಎರಡೂ ಕಡೆ32 ಕಿ.ಮೀ. ಹಾಕಲಾಗಿದೆ.

ಈ ಬಾರಿಯೂ 60ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ.ಇದಕ್ಕೆ ಜನರ ಸಹಕಾರ ಅಗತ್ಯ ಎಂದುಹೇಳಿದರು.ಅರಣ್ಯ ಬೆಳೆಸಲು ಮುಂದಾಗಿ: ತಾಲೂಕನ್ನುನಾವು ಹಸಿರೀಕರಣ ಮಾಡಲು, ಗಡಿ ಭಾಗದಎಲ್ಲಾ ಖಾಲಿ ಜಾಗಗಳಲ್ಲಿ ಸಸಿ ನೆಡಲುಮುಂದಾಬೇಕು. ಸರ್ಕಾರಿ ಕಚೇರಿ, ಶಾಲಾಆವರಣ, ನಮ್ಮ ಮನೆ ಸುತ್ತಮುತ್ತ ಸಸಿ ನೆಟ್ಟುಪೋಷಣೆ ಮಾಡಬೇಕು.

ನಗರದ ಅಂಬೇಡ್ಕರ್‌ವೃತ್ತದಿಂದ ಬೈಪಾಸ್‌ ರಸ್ತೆಯವರೆಗೂ ಸಸಿನೆಡಬೇಕಿದೆ. ಇದರಿಂದ ನಗರ ಮತ್ತು ತಾಲೂಕಿನಎಲ್ಲಾ ಪ್ರದೇಶವನ್ನು ಹಸಿರೀಕರಣ ಮಾಡಲುಕೈಜೋಡಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್‌ ಎಚ್‌.ಶ್ರೀನಿವಾಸ್‌, ನಗರಸಭೆಅಧ್ಯಕ್ಷೆ ಗಾಯತ್ರಿ ಬಸವರಾಜು, ವಲಯಅರಣ್ಯಾಧಿಕಾರಿ ಮಂಜುನಾಥ್‌, ಪೌರಾಯುಕ್ತಸತ್ಯನಾರಾಯಣ್‌, ಪದ್ಮಜಾ, ಯಲ್ಲಪ್ಪ, ನಗರಸಭೆಸದಸ್ಯ ಮಾರ್ಕೆಟ್‌ ಮೋಹನ್‌, ನಗರಸಭೆ ಮಾಜಿಸದಸ್ಯ ಕೆ.ಎಸ್‌.ಅನಂತರಾಜು, ಕಂದಾಯಇಲಾಖೆಯ ಖಾದರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next