Advertisement

ಜಪಾನ್ ಪ್ರಧಾನಿ ಶಿಷ್ಯವೇತನಕ್ಕೆ ಮುದ್ದೇಬಿಹಾಳದ ಗೌರಿ ಬಗಲಿ ಆಯ್ಕೆ

11:33 AM Oct 14, 2021 | Team Udayavani |

ಮುದ್ದೇಬಿಹಾಳ : ಜಪಾನ್ ಪ್ರಧಾನ ಮಂತ್ರಿಗಳ ಪ್ರತಿಷ್ಠಿತ ಏಷಿಯಾ ಕಾಕೇಹಾಸಿ ಶಿಷ್ಯವೇತನಕ್ಕೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಎಂಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟನ ಧರ್ಮದರ್ಶಿಯಾಗಿರುವ ಇಂಡಿಯ ಸಂಕೇತ ಬಗಲಿ ಮತ್ತು ಜಯಲಕ್ಷ್ಮೀ ಬಗಲಿ ಅವರ ಪುತ್ರಿ  ಗೌರಿ  ಬಗಲಿ ಆಯ್ಕೆಯಾಗಿದ್ದಾರೆ.

Advertisement

ಗೌರಿ ಸದ್ಯ ಮಹಾರಾಷ್ಟ್ರದ  ಕೊಲ್ಹಾಪೂರದ ಸಂಜಯ ಘೋಡಾವತ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಶಿಷ್ಯವೇತನಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಲಿಖಿತ ಹಾಗೂ ಮೌಖಿಕ ಪರೀಕ್ಷೆ ನಡಸಲಾಗುತ್ತದೆ. ಅದರಲ್ಲಿ ಸಾಧನೆ, ಪ್ರತಿಭೆ ಆಧಾರದಲ್ಲಿ ಆಯ್ಕೆಯಾದ 21 ವಿದ್ಯಾರ್ಥಿಗಳಲ್ಲಿ ಗೌರಿಯೂ ಕೂಡ ಒಬ್ಬರಾಗಿದ್ದಾರೆ.

ಈ ಮೂಲಕ ಗೌರಿ ಕರ್ನಾಟಕ ರಾಜ್ಯವನ್ನು ಇಡೀ ದೇಶದಲ್ಲೇ ಹೆಸರಾಗುವಂತೆ ಮಾಡಿದ್ದು ಹೆಮ್ಮೆಯ ಸಂಗತಿ ಎನ್ನಿಸಿಕೊಂಡಿದೆ.

ವಿದ್ಯಾರ್ಥಿನಿಯ ಸಾಧನೆಗೆ ಅವರ ಅಜ್ಜ ಮುದ್ದೇಬಿಹಾಳ ಎಸ್.ಜಿ.ವಿ.ಸಿ ವಿದ್ಯಾಪ್ರಸಾರಕ ಟ್ರಸ್ಟ್ ಅಧ್ಯಕ್ಷ ಸತೀಶ ಜಿಗಜಿನ್ನಿ, ಕಾರ್ಯದರ್ಶಿ ಅಶೋಕ ತಡಸದ, ಆಡಳಿತಾಧಿಕಾರಿ ಎ.ಬಿ.ಕುಲಕರ್ಣಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎನ್.ಪೊಲೇಶಿ, ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಐ.ಎಸ್.ತಳವಾರ, ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಕೆ.ಕುಲಕರ್ಣಿ ಸೇರಿ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next