Advertisement
ಪುರಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ, 2002 ರಲ್ಲಿ ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಜಮೀರ್ ಅಹಮದ್‌ನನ್ನು ಪಕ್ಷಕ್ಕೆ ಕರೆತಂದಿದ್ದೆ. ಈಗ ಕಾಂಗ್ರೆಸ್‌ಗೆ ಸೇರಲು ರಾಹುಲ್‌ಗಾಂಧಿ ಭೇಟಿ ಮಾಡಿಸಿದ್ದೇನೆ. ಸದ್ಯದಲ್ಲೇ ಜಮೀರ್ ಆಹಮದ್ ಸೇರಿ ಏಳು ಶಾಸಕರು ಕಾಂಗ್ರೆಸ್ ಸೇರಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಸಮುದಾಯ ಡೋಂಗಿ ಜಾತ್ಯತೀತವಾದಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಂಗ್ರೆಸ್ ಪಕ್ಷ ಮಾತ್ರ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಲಾ 2 ಲಕ್ಷ ರೂ. ವೆಚ್ಚದಲ್ಲಿ 35 ಧಾರ್ಮಿಕ ಗುರುಗಳಿಗೆ ಹಜ್‌ಯಾತ್ರೆಗೆ ಕಳುಹಿಸಲಾಯಿತು. 30 ಅಂಗವಿಕಲರಿಗೆ ಆಟೋ ವಿತರಿಸಲಾಯಿತು. ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ಧಾರ್ಮಿಕ ಗುರುಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Related Articles
ಎಲ್ಲ ಸಮುದಾಯವನ್ನು ಒಟ್ಟಿಗೆ ಕೊಂಡೊಯ್ಯುವ ವಿಚಾರದಲ್ಲಿ ಮತ್ತು ಜ್ಯಾತ್ಯತೀತ ನಾಯಕ ಹೇಗಿರಬೇಕು ಎಂಬುದನ್ನು ದೇಶದ ಎಲ್ಲ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಬೇಕು. ಇವರು ನೈಜ ಸೆಕ್ಯುಲರ್ ಲೀಡರ್. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸಲಿದೆ.
-ಜಮೀರ್ ಅಹಮದ್, ಜೆಡಿಎಸ್ ಬಂಡಾಯ ಶಾಸಕ
Advertisement