Advertisement

ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು : ಸಚಿವ ಆರ್.ಅಶೋಕ್

12:50 PM Feb 09, 2022 | Team Udayavani |

ಬೆಂಗಳೂರು : ಕಾಲೇಜು ಕ್ಯಾಂಪಸ್ ನ ಒಳಗೆ ಕೇಸರಿ ಶಾಲು ಹಾಗೂ ಹಿಜಾಬ್ ಎರಡನ್ನು ಧರಿಸುವುದೂ ತಪ್ಪು. ಸಮವಸ್ತ್ರ ಸಂಹಿತೆ ಪಾಲನೆಯಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಕಾಂಗ್ರೆಸ್ ನ ಷಡ್ಯಂತ್ರ ಇದೆ.ಕಾಂಗ್ರೆಸ್ ನ ಒಂದು ವರ್ಗ ಪ್ರಚೋದನೆ ನೀಡುತ್ತದೆ. ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತದೆ ಎಂದು ಆರೋಪಿಸಿದರು. ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ಗೆ ಏನು ಬೇಕು ಆ ಸ್ಟೇಟ್ಮೆಂಟ್ ನೀಡಿದ್ದಾರೆ.ಅಲ್ಲಿನ ಎಸ್ ಪಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.ಧ್ವಜ ಇಳಿಸಿಲ್ಲ ಎಂದು ಹೇಳಿದ್ದಾರೆ. ಎಸ್ ಪಿ ಹೇಳೋದು ನಿಖರ ಮಾಹಿತಿ, ಡಿಕೆಶಿ ಹೇಳಿದ್ದು ಅಲ್ಲ.ಆದ್ರೆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು ಎಂದು ಅಭಿಪ್ರಾಯ ಪಟ್ಟರು.

ಡ್ರೆಸ್ ಕೋಡ್ ಏನಿದೆ ಎಂದು ಸರ್ಕಾರ ಆದೇಶಿಸಿದೆ. ಹಿಜಾಬ್,ಕೇಸರಿ ಶಾಲು ಧರಿಸುವುದು ತಪ್ಪು.ಶಾಲೆ ಆವರಣದಲ್ಲಿ ಎರಡೂ ತಪ್ಪೇ.ಕೋರ್ಟ್ ತೀರ್ಪು ಬರಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next