Advertisement
ಶಿವಾಜಿನಗರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಟಕ್ಕರ್ ನೀಡುವಷ್ಟು ಸುಸಜ್ಜಿತ ಹಾಗೂ ಸುಂದರವಾಗಿ 74 ಕೋಟಿ ರೂ.ನಲ್ಲಿ ನಾಲ್ಕು ಮಹಡಿವುಳ್ಳ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. 130 ಕ್ಕೂ ಅಧಿಕ ಹಾಸಿಗೆಗಳಿವೆ. ಶಸ್ತ್ರ ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ, ತುರ್ತು ಸೇವೆ, ಪ್ರಯೋಗಾಲಯ ವಿಭಾಗ, ಹೊಸ ಹಾಸಿಗೆಗಳು, ಹೃದ್ರೋಗ, ನ್ಯೂರೋ ಸೇರಿ ವಿವಿಧ ಚಿಕಿತ್ಸಾ ಕೇಂದ್ರಗಳಿವೆ. ಆದರೆ, ಅವುಗಳೆಲ್ಲವೂ ಬಳಕೆ ಆಗದೇ ಮೂಲೆಗುಂಪಾಗಿವೆ. ಏಕೆಂದರೆ ಇಲ್ಲಿ ಒಬ್ಬನೇ ಒಬ್ಬ ವೈದ್ಯ ಹಾಗೂ ಸಿಬ್ಬಂದಿ ಇಲ್ಲ. ಎರಡು ವರ್ಷಗಳ ಹಿಂದೆಯೇ ಆಸ್ಪತ್ರೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
Related Articles
Advertisement
ಯಾರಿಗೆ ಹೇಗೆ ಅನುಕೂಲ: ಈ ಆಸ್ಪತ್ರೆಯು ಕಾರ್ಯಾ ರಂಭವಾದರೆ ಶಿವಾಜಿನಗರದ ಸುತ್ತ ಮುತ್ತ ಲಿನ ಜನರಿಗೆ ಅನುಕೂಲವಾಗಲಿದೆ. ಹೃದ ಯಾಘಾತ ಹಾಗೂ ನರ ಸಂಬಂಧಿಸಿದ ತುರ್ತು ಅನಾರೋಗ್ಯದ ಗೋಲ್ಡನ್ ಅವಧಿಯಲ್ಲಿ ಜಯ ದೇವ ಹಾಗೂ ನಿಮ್ಹಾನ್ಸ್ ಬದಲಾಗಿ ಶಿವಾಜಿ ನಗರದ ಚರಕದಲ್ಲಿ ಚಿಕಿತ್ಸೆ ದೊರಕಿದರೆ ರೋಗಿಗಳಿಗೆ ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ಸಿಗಲಿದೆ.
ಖಾಲಿ -ಖಾಲಿ: ಪ್ರಸ್ತುತ ಆಸ್ಪತ್ರೆಯೊಳಗೆ ಇಬ್ಬರು ಸಿಬ್ಬಂದಿ ಇದ್ದಾರೆ. ಅವರನ್ನು ಹೊರತು ಪಡಿಸಿ ಆಚೆ ಕಡೆ ಗಮನ ಹರಿಸಿದರೆ ಇಲಿ, ಬೆಕ್ಕುಗಳು ಕಾಣಸಿಗುತ್ತದೆ. ಇಡೀ ಆಸ್ಪತ್ರೆ ಖಾಲಿಯಾಗಿದೆ. ವೆಂಟಿಲೇರ್ ಸಿಲಿಂಡರ್‌ಗಳು ಕಟ್ಟಡ ಹೊರ ಭಾಗದ ಕೊಠಡಿಯಲ್ಲಿ ಬೀಗ ಹಾಕಿ ಇಡಲಾಗಿದೆ. ವ್ಯವಸ್ಥೆಗಳಿದ್ದರೂ ವೈದ್ಯರು ನೇಮಕವಾಗದ ಆಸ್ಪತ್ರೆ ನೋಡಿ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಸೇವಾ ಮನೋಭಾವಕ್ಕಿಲ್ಲ ಗೌರವ
ಸೇವಾ ಮನೋಭಾವದಿಂದ ಇನ್ಫೋಸಿಸ್ ಫೌಂಡೇಶನ್ ಓಟಿ ಟೇಬಲ್, ಲೈಟ್ಸ್, ಪೀಠೊಪಕರಣ, ಐಸಿಯು ಬೆಡ್, ಟ್ರಾಲಿ, ಪ್ರೀಮಿಯಂ ಇಂಟರ್ವೆನÒನಲ್ ಕಾರ್ಡಿಯಾಲಜಿ ಲ್ಯಾಬ್, ವೆಂಟಿಲೇಟರ್, ಇಸಿಜಿ, ವೈದ್ಯಕೀಯ ಅನಿಲ ಪೈಪ್, ಮೊಬೈಲ್ ಎಕ್ಸ್‌ರೇ, ರೋಗಿಗಳ ಮಾನಿಟರಿಂಗ್ ವ್ಯವಸ್ಥೆ ಸೇರಿ ಇತರೆ ಸೌಲಭ್ಯಗಳನ್ನು ಕಲ್ಪಿಸಲು 10.25 ಕೋಟಿ ರೂ. ಧನಸಹಾಯ ನೀಡಿದೆ. ಆದರೆ, ಸರ್ಕಾರಕ್ಕೆ ಸೇವಾ ಮನೋಭಾವದಿಂದ ನೀಡಿರುವ ವೈದ್ಯಕೀಯ ಉಪಕರಣಗಳು ಬಳಕೆಯಾಗದೇ ಮೂಲೆ ಗುಂಪಾಗಿವೆ.
ಸರ್ಕಾರದಿಂದ ಅನುಮತಿ ದೊರೆತ ಅನಂತರ ಆಸ್ಪತ್ರೆಯ ಕಾರ್ಯಾ ಚರಣೆ ಪ್ರಾರಂಭವಾಗಲಿದೆ. ಮುಂದಿನ ತಿಂಗಳೊಳಗಾಗಿ 150 ವೈದ್ಯರು, ಸಿಬ್ಬಂದಿಗಳ ನೇಮಕಾತಿ ನಡೆಯಲಿದೆ. ನಂತರ ಸಾರ್ವಜನಿಕರ ಸೇವೆಗೆ ತೆರೆಯಲಾಗುತ್ತದೆ. ● ಡಾ.ಮನೋಜ್ ಕುಮಾರ್, ನಿರ್ದೇಶಕರು(ಡೀನ್), ಬೌರಿಂಗ್ ಬೆಂಗಳೂರು
● ತೃಪ್ತಿ ಕುಮ್ರಗೋಡು