ಕೋಲಾರ: ಸರ್ಕಾರಿ ಶಾಲೆಗಳನ್ನು ಉಳಿಸಲು ಆಂದೋಲನ ನಡೆಸಿ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಂಡವಾಳ ಶಾಹಿ ಗಳ ಗುಲಾಮರಾಗಬೇಕಾಗುತ್ತದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಸಹ ಯೋಗದಡಿ ತಾವೇ ಕೊಡುಗೆಯಾಗಿ ನೀಡಿದ ಒಂದು ಲಕ್ಷ ರೂ. ಮೌಲ್ಯದ ಟ್ಯಾಬ್ ಗಳನ್ನು ಜ್ಞಾನದೀವಿಗೆ ಮಹಾಯಜ್ಞ ಯೋಜನೆಯಡಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿತರಿಸಿ ಅವುಗಳ ಸದುಪಯೋಗಕ್ಕೆ ತಿಳಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಈ ಶಾಲೆಗಳ ಕುರಿತು ನಂಬಿಕೆ ಬಲಗೊಳಿಸಬೇಕು, ಇಲ್ಲವಾದಲ್ಲಿ ಮುಂದಿನ 10 ವರ್ಷಗಳಲ್ಲಿ ಸರ್ಕಾರಿ ಶಾಲೆ ಗಳು ಮುಚ್ಚಿದರೆ ಆಗ ಖಾಸಗಿ ಶಾಲೆಗಳೇ ಗತಿಯಾಗಿ ಬಂಡವಾಳ ಶಾಹಿಗಳ ಗುಲಾಮ ರಾಗಬೇಕಾಗುತ್ತದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಯಲ್ಲಿ ತೇರ್ಗಡೆಯಾಗಿ ಶೇ.100 ಫಲಿತಾಂಶ ಈ ಶಾಲೆಗೆ ತಂದರೆ ಅಂತಹ ಎಲ್ಲಾ ಮಕ್ಕಳ ಮುಂದಿನ ವ್ಯಾಸಂಗದ ಶುಲ್ಕ ತಾವು ಭರಿಸುವುದಾಗಿ ಭರವಸೆ ನೀಡಿದರು. ಕೋಲಾರ ಜಿಲ್ಲೆ ಸಾಧಕರ ಬೀಡು: ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಅವಿಭಜಿತ ಜಿಲ್ಲೆ ಇಡೀ ರಾಜ್ಯ ದಲ್ಲೇ ಇಬ್ಬರು ಭಾರತ ರತ್ನರಾದ ವಿಶ್ವೇಶ್ವ ರಯ್ಯ, ಸಿಎನ್‌ಆರ್ ರಾವ್, ಕನ್ನಡದ ಆಸ್ತಿ ಮಾಸ್ತಿ, ಡಿವಿಜಿ, ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ರಂತಹ ಮಹನೀಯರ ಬೀಡು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಭಾರತಸೇವಾ ದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ಜಿಲ್ಲಾ ಸಹ ಕಾರಿ ಯೂನಿಯನ್ ಅಧ್ಯಕ್ಷ ಚೆಂಜಿ ಮಲೆ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್. ನಾಗರಾಜಗೌಡ, ಗ್ರಾಪಂ ಸದಸ್ಯ ಎ.ಎಸ್.ನಂಜುಂಡೇಗೌಡ ಮಾತನಾಡಿ ದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ತಮ್ಮೂರು ಅಲ್ಲದಿದ್ದರೂ, ನಿರಂತರವಾಗಿ ಸರ್ಕಾರಿ ಶಾಲೆಗೆ ಪ್ರತಿವರ್ಷವೂ ನೆರವು ನೀಡುತ್ತಿ ರುವ ಬ್ಯಾಲಹಳ್ಳಿ ಗೋವಿಂದಗೌಡರ ಹೃದಯವಂತಿಕೆಗೆ ನಾವು ಋಣಿಗಳಾಗಿ ದ್ದೇವೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ನಂಜುಂ ಡಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಹೇಮಾ ವತಿ, ಸದಸ್ಯೆ ಪಾರ್ವತಿ, ಶಿಕ್ಷಕರಾದ ಎಸ್. ಅನಂತಪದ್ಮನಾಭ್, ಸಚ್ಚಿದಾನಂದ ಮೂರ್ತಿ, ಭವಾನಿ, ಶ್ವೇತಾ, ಸುಗುಣ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ದ್ರಾಕ್ಷಾಯಿಣಿ, ಚಂದ್ರಶೇಖರ್, ವಸಂತಮ್ಮ, ನೇತ್ರಮ್ಮ, ಮತ್ತಿತರರಿದ್ದರು.