Advertisement

ಲಂಚ, ಭ್ರಷ್ಟಾಚಾರ, ಅಕ್ರಮ ಆಸ್ತಿ : 15 ಹಿರಿಯ ಕಸ್ಟಮ್ಸ್‌ ಅಧಿಕಾರಿಗಳು ಸೇವೆಯಿಂದ ವಜಾ

11:50 AM Jun 19, 2019 | Sathish malya |

ಹೊಸದಿಲ್ಲಿ : ಭ್ರಷ್ಟ, ಲಂಚಕೋರ ಆದಾಯ ತೆರಿಗೆ ಅಧಿಕಾರಿಗಳನ್ನು ಕಿತ್ತು ಹಾಕಿದ ಬೆನ್ನಿಗೇ ಸರಕಾರ ಇಂದು ಮಂಗಳವಾರ ಭಷ್ಟಾಚಾರ ಮತ್ತು ಲಂಚ ತೆಗೆದುಕೊಂಡ 15 ಹಿರಿಯ ಕಸ್ಟಮ್ಸ್‌ ಮತ್ತು ಕೇಂದ್ರ ಅಬಕಾರಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ.

Advertisement

ಸೇವೆಯಿಂದ ವಜಾಗೊಳಿಸಲ್ಪಟ್ಟ ಈ 15 ಮಂದಿಯಲ್ಲಿ ಒಬ್ಬರು ಮುಖ್ಯ ಆಯಕ್ತರೂ ಸೇರಿದ್ದಾರೆ.

56(ಜೆ) ಮೂಲಭೂತ ನಿಯಮ  ಪ್ರಕಾರ ಪರೋಕ್ಷ ತೆರಿಗೆ ಕೇಂದ್ರ ಮಂಡಳಿಯ (ಸಿಬಿಐಸಿ) ಮುಖ್ಯ ಆಯುಕ್ತರಿಂದ ತೊಡಗಿ ಸಹಾಯಕ ಕಮಿಷನರ್‌ ವರೆಗಿನ 15 ಅಧಿಕಾರಿಗಳನ್ನು (ಇವರಲ್ಲಿ ಕೆಲವರು ಈಗಾಗಲೇ ಅಮಾನತಿನಲ್ಲಿದ್ದಾರೆ) ಲಂಚ ಸ್ವೀಕಾರ ಮತ್ತು ಭ್ರಷ್ಟಾಚಾರದ ಅಪರಾಧಗಳಿಗಾಗಿ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಆದೇಶ ತಿಳಿಸಿದೆ.

ಸೇವೆಯಿಂದ ವಜಾಗೊಳಿಸಲ್ಪಟ್ಟಿರುವ ಈ 15 ಅಧಿಕಾರಿಗಳ ವಿರುದ್ಧ ಒಂದೋ ಸಿಬಿಐ ನಿಂದ ಕೇಸು ದಾಖಲಾಗಿತ್ತು ಇಲ್ಲವೇ ಇವರು ಲಂಚ, ಸುಲಿಗೆ ಮತ್ತು ಅಕ್ರಮ ಆಸ್ತಿ ಪಾಸ್ತಿ  ಅಪರಾಧದಲ್ಲಿ ಶಾಮೀಲಾಗಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next