Advertisement

ನಗದು ವಹಿವಾಟು ಮಿತಿ 3ರಿಂದ 2 ಲಕ್ಷ ರೂ.ಗೆ ಇಳಿಸಲು ಕೇಂದ್ರದ ಪ್ರಸ್ತಾಪ

07:49 PM Mar 21, 2017 | |

ಹೊಸದಿಲ್ಲಿ : ಕೇಂದ್ರ ಸರಕಾರಕಪ್ಪು ಹಣದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿರು ವಂತೆಯೇ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರಿಂದು ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದ ನಗದು ವಹಿವಾಟಿನ 3 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು 2 ಲಕ್ಷ ರೂ.ಗೆ ಇಳಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. 

Advertisement

ಬಜೆಟ್‌ನಲ್ಲಿ ಪ್ರಸ್ತಾವಿಸಿದಂತೆ ನಗದು ವಹಿವಾಟಿನ 3 ಲಕ್ಷ ರೂ.ಗಳ ಗರಿಷ್ಠ ಮಿತಿಯು ಇದೇ ಎಪ್ರಿಲ್‌ 1ರಿಂದ ಜಾರಿಗೆ ಬರುವುದಿತ್ತು. ಈ ಮಿತಿಯನ್ನು 2 ಲಕ್ಷ ರೂ.ಗಳಿಗೆ ಇಳಿಸುವ ಪ್ರಸ್ತಾವವನ್ನು ಜೇತ್ಲಿ ಅವರಿಂದು ಸರಕಾರದ ಮುಂದಿರಿಸಿದರು. 

ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವು ಗರಿಷ್ಠ ನಗದು ವಹಿವಾಟಿಗೆ 3 ಲಕ್ಷ ರೂ.ಗಳ ಮಿತಿ ಹೇರಬೇಕೆಂದು ಶಿಫಾರಸು ಮಾಡಿತ್ತು. ಈ ವಿಶೇಷ ತನಿಖಾ ತಂಡವನ್ನು ಸುಪ್ರೀಂ ಕೋರ್ಟ್‌ ರೂಪಿಸಿತ್ತು. ಅದರ ಶಿಫಾರಸನ್ನು ಜೇತ್ಲಿ ಅವರು 2017-18ರ ಬಜೆಟ್‌ನಲ್ಲಿ ನಮೂದಿಸಿದ್ದರು. 

ನಿವೃತ್ತ ಜಸ್ಟಿಸ್‌ ಎಂ ಬಿ ಶಾ ನೇತೃತ್ವದ ವಿಶೇಷ ತನಿಖಾ ತಂಡವು ಕಳೆದ ವರ್ಷ ಜುಲೈಯಲ್ಲಿ ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತನ್ನ ಐದನೇ ವರದಿಯನ್ನು ಸಲ್ಲಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next