Advertisement
ಮಂಗಳವಾರ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಬಿಜೆಪಿಯ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿ,“ಸಿದ್ದರಾಮಯ್ಯನವರಿಗೆ ಹಣಕಾಸು ಸಚಿವರಾಗಿದ್ದಾಗ ಕಾಗಿನೆಲೆ, ಕನಕದಾಸರ ನೆನಪು ಆಗಿರಲಿಲ್ಲ. ನಾನು
ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕೋಟ್ಯಂತರ ರೂ.ಅನುದಾನ ಕೊಟ್ಟಿದ್ದೆನೆ. ಜಗತ್ತಿನಲ್ಲಿ ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಂದರು. “ಬಿಜೆಪಿ ಸರ್ಕಾರ ಅಧಿಕಾರಕ್ಕೆ
ಬಂದು ನಾನು ಮುಖ್ಯಮಂತ್ರಿ ಆದ ಮೇಲೆ ಹಿಂದುಳಿದವರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕೇಂದ್ರದಿಂದ ದೊಡ್ಡ ಆರ್ಥಿಕ ನೆರವು ತಂದು ಅಭಿವೃದ್ಧಿ ಮಾಡುತ್ತೇನೆ. ನೀರಾವರಿಗೆ ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟು
ರೈತರ ಭೂಮಿಗೆ ನೀರು ಹರಿಸುವುದಾಗಿ ಹೇಳಿದರು. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.
ಹಾವೇರಿ: ಸಿದ್ದರಾಮಯ್ಯ ಅವರೇ ಹೇಳುವಂತೆ ಇದು ಅವರ ಕೊನೆಯ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿಧಾನಸಭೆಯಿಂದ ಔಟ್ (ಹೊರಗೆ). ಬಿಜೆಪಿ ಇನ್ (ಒಳಗೆ) ಆಗಲಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು. ಮಂಗಳವಾರ ಕಾಗಿನೆಲೆಯಲ್ಲಿ ನಡೆದ ಬಿಜೆಪಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿ, ಸಿದ್ದರಾಮಯ್ಯ ಚುನಾವಣಾ ಚಾಣಕ್ಯ ಅಮಿತ್ ಶಾ ಬಗ್ಗೆ ಟೀಕೆ ಮಾಡುತ್ತಾರೆ. ಅವರು ತಮ್ಮ ಕೊನೆಯ ಟೀಕೆ ಮಾಡಿ
ಮನೆಗೆ ಹೋಗಲಿ. ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲುವುದೇ ಇಲ್ಲ. ಮೇ 12ಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ 22ನೇ ರಾಜ್ಯವಾಗಿ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದರು. ಕನಕ ಗುರುಪೀಠ ಮಠಕ್ಕೆ ಶಾ ಭೇಟಿ
ಹಾವೇರಿ: ಹೆಲಿಕಾಪ್ಟರ್ ಮೂಲಕ ಕಾಗಿನೆಲೆಗೆ ಆಗಮಿಸಿದ ಅಮಿತ್ ಶಾ ನೇರವಾಗಿ ಕಾಗಿನೆಲೆ ಕನಕ ಗುರುಪೀಠದ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ ಪ್ರಧಾನ ಸ್ವಾಮೀಜಿ ನಿರಂಜನಾನಂದಪುರಿ ಸ್ವಾಮೀಜಿ ಇರಲಿಲ್ಲ. ಮಠದ ಕಿರಿಯ ಶ್ರೀಗಳಾದ ಅಮೋಘಾನಂದ ಸ್ವಾಮೀಜಿ, ತಿಂತಣಿ ಶಾಖಾ ಮಠದ ಸಿದ್ದರಾಮನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಇದ್ದರು. ಶ್ರೀಗಳು ಅಮಿತ್ ಶಾ ಅವರನ್ನು ಕಂಬಳಿ ಹೊದಿಸಿ, ಸನ್ಮಾನಿಸಿದರು.
Related Articles
● ಕೆ.ಎಸ್. ಈಶ್ವರಪ್ಪ, ವಿಪಕ್ಷ ನಾಯಕ
Advertisement
ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ತಪೋಭೂಮಿಯಾದ ಕನಕದಾಸರ ಕರ್ಮಭೂಮಿಗೆ ಇದೇ ಮೊದಲ ಬಾರಿ ಭೇಟಿ ಕೊಟ್ಟಿದ್ದೇನೆ. ಈ ಭೇಟಿಯಿಂದ ನನಗೆ ಪಾವನವಾದ ಭಾವ ಬಂದಿದೆ.● ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ