Advertisement

ಪಿಂಚಣಿ ಕ್ಷೇತ್ರದ FDA ಹೆಚ್ಚಳಕ್ಕೆ ನಿರ್ಧಾರ: ಶೇ. 74ಕ್ಕೆ ಏರಿಸಲು ತೀರ್ಮಾನ

08:12 PM Apr 11, 2021 | |

ನವದೆಹಲಿ: ಪಿಂಚಣಿ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ ಪ್ರಮಾಣವನ್ನು ಶೇ. 74ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಪಿಂಚಣಿ ಕ್ಷೇತ್ರದಲ್ಲಿ ಎಫ್ಡಿಐ ಪ್ರಮಾಣ ಶೇ. 49ರಷ್ಟಿದೆ.

Advertisement

ಈ ನಿಯಮ ಬದಲಾವಣೆಗಾಗಿ, 2013ರ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಆಯೋಗ ಕಾಯ್ದೆಗೆ (ಪಿಎಫ್ಆರ್‌ಡಿಎ) ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಿಧೇಯಕವೊಂದನ್ನು ಸಿದ್ಧಪಡಿಸಲಾಗುತ್ತಿದ್ದು, ಇದೇ ವರ್ಷದ ಸಂಸತ್‌ ಮಾನ್ಸೂನ್‌ ಅಥವಾ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಪಿಎಫ್ಆರ್‌ಡಿಎಂನಿಂದ ಎನ್‌ಪಿಎ ಪ್ರತ್ಯೇಕ
ಇದೇ ಮಸೂದೆಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಟ್ರಸ್ಟ್‌ (ಎನ್‌ಪಿಎ) ಅನ್ನು ಪಿಎಫ್ಆರ್‌ಡಿಎನಿಂದ ಪ್ರತ್ಯೇಕಿಸುವ ಅಂಶವನ್ನೂ ಸೇರಿಸಲಾಗುತ್ತದೆ. ಸದ್ಯಕ್ಕೆ ಪಿಎಫ್ಆರ್‌ಡಿಎ ನಿಯಮಾವಳಿಗಳ ಅಡಿಯಲ್ಲೇ ಎನ್‌ಪಿಎ ಕಾರ್ಯ ನಿರ್ವಹಿಸುತ್ತಿದೆ. ಪಿಎಫ್ಆರ್‌ಡಿಎನಿಂದ ಪ್ರತ್ಯೇಕಗೊಳ್ಳಲಿರುವ ಎನ್‌ಪಿಎಯನ್ನು ಚಾರಿಟಬಲ್‌ ಟ್ರಸ್ಟ್‌ ಅಥವಾ ಕಂಪನಿಗಳ ಕಾಯ್ದೆಯಡಿ ತರಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ :ಕೋವಿಡ್ ಪ್ರಕರಣ ಹೆಚ್ಚಳ: ಏಪ್ರಿಲ್ 30ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಯುಪಿ ಸರ್ಕಾರ

ಹೀಗೆ, ಪ್ರತ್ಯೇಕಗೊಳ್ಳಲಿರುವ ಎನ್‌ಪಿಎಗಾಗಿ 15 ಸದಸ್ಯರುಳ್ಳ ಹೊಸ ಆಡಳಿತ ಮಂಡಳಿ ಅಸ್ವಿತ್ವಕ್ಕೆ ಬರಲಿದೆ. ಅದರಲ್ಲಿ ಹೆಚ್ಚಿನ ಸದಸ್ಯರು ಸರ್ಕಾರದಿಂದ ನಾಮನಿರ್ದೇಶಿತರಾಗಿರಲಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ರಾಜ್ಯಗಳ ಪ್ರತಿನಿಧಿಗಳು ಸದಸ್ಯರಾಗಿರಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next