Advertisement

ಪಿಪಿಎಫ್ ಖಾತೆ ಅವಧಿಗೆ  ಮುನ್ನವೇ ಮುಚ್ಚುವ ಅವಕಾಶ?

08:06 AM Feb 14, 2018 | Team Udayavani |

ಹೊಸದಿಲ್ಲಿ: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯನ್ನು ಅವಧಿಗೆ ಮುನ್ನವೇ ಮುಚ್ಚುವಂಥ ಹಾಗೂ ಅಪ್ರಾಪ್ತ ವಯಸ್ಸಿನವರ ಹೆಸ ರಲ್ಲೂ ಸಣ್ಣ ಉಳಿತಾಯ ಖಾತೆಗಳನ್ನು ತೆರೆಯುವಂಥ ಅವಕಾಶ ಕಲ್ಪಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

Advertisement

2018ರ ಹಣಕಾಸು ಮಸೂದೆಯಲ್ಲಿ ಈ ಬದಲಾವಣೆಗಳನ್ನು ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯವೇ ಮಾಹಿತಿ ನೀಡಿದೆ. ಕೆಲವೊಂದು ಬದಲಾವಣೆಗಳಿಗೆ ಪ್ರಸ್ತಾವ ಮಾಡಲಾಗಿದೆ.ಹಾಗಿದ್ದರೂ ಠೇವಣಿ  ದಾರರಿಗೆ ಸದ್ಯ ನೀಡಲಾಗುತ್ತಿ ರುವ ಅನುಕೂಲಗಳಿಗೆ ಕತ್ತರಿ ಹಾಕು ವುದಿಲ್ಲ. ಬಡ್ಡಿ ದರವನ್ನೂ ಬದಲಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ವೈದ್ಯಕೀಯ ತುರ್ತು ಸ್ಥಿತಿ, ಉನ್ನತ ಶಿಕ್ಷಣದ ವೆಚ್ಚ ಭರಿಸುವಂಥ ಸಮಯದಲ್ಲಿ ಖಾತೆದಾರರಿಗೆ ನೆರ ವಾಗಲು ಇದನ್ನು ಅವಧಿಗೆ ಮುನ್ನವೇ ಮುಚ್ಚುವ ಅವಕಾಶ ಕಲ್ಪಿಸಲಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ ಪಿಪಿಎಫ್ ಖಾತೆ 5 ವರ್ಷ ಪೂರ್ಣಗೊಳ್ಳದೇ ಮುಚ್ಚುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next