Advertisement
ಚುನಾಯಿತರಾಗಿ ಮೂರು ವರ್ಷವಾದರೂ ಇಲಾಖೆಗಳಲ್ಲಿ ಏನು ನಡೆದಿದೆ ಎನ್ನುವ ಕುರಿತು ಮಾಹಿತಿ ನೀಡುತ್ತಿಲ್ಲ. ಸಭೆಗೆ ಅಧಿಕಾರಿಗಳ ಬದಲು ಸಿಬ್ಬಂದಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಭೂಸೇನಾ ನಿಗಮ, ಬಿಸಿಎಂ ಜೆಸ್ಕಾಂ ಹೀಗೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರಿಂದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಸಭೆಗೆ ಗೈರಾಗಿದ್ದ ಭೂಸೇನಾ ಅಧಿಕಾರಿ ಜಾಫರ್ ಅವರನ್ನು ಸಂಪರ್ಕಿಸಿದ ಇಒ ಅವರು ಅಲಿ ಸಭೆಗೆ ಮೊಬೈಲ್ ಮೂಲಕ ಕರೆ ಮಾಡಿ ಕರೆಯಬೇಕೋ, ಪೂಜೆ ಮಾಡಿ ಕರೆಯಬೇಕೋ? ಏಕೆ ಸಭೆಗೆ ಬರುತ್ತಿಲ್ಲ. ಸದಸ್ಯರ ಪ್ರಶ್ನೆಗೆ ಯಾರು ಉತ್ತರಿಸಬೇಕು ಎಂದು ಗುಡುಗಿದರು.
ಬೇಸಿಗೆ ಮತ್ತು ಬರಗಾಲ ಎರಡು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಹೇಳಬೇಕೆಂದರೆ ಜೆಸ್ಕಾಂ ಮತ್ತು ಜಿಪಂ ಅಧಿಕಾರಿಗಳೇ ಬಂದಿಲ್ಲ. ಸಭೆ ಮುಂದೂಡಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಕೈ ಮೇಲೆತ್ತುವ ಮೂಲಕ ಆಗ್ರಹಿಸಿದರು. ಆಗ ಇಒ ಅನಿತಾ ಕೊಂಡಾಪುರ ಅನಿವಾರ್ಯವಾಗಿ ಸಭೆ ಮುಂದೂಡಿದರು.
ತಾಪಂ ಅಧ್ಯಕ್ಷೆ ನಾಗಪ್ಪ ಅಶೋಕ ಗುತ್ತೇದಾರ, ಸದಸ್ಯ ಪ್ರಭು ಸರಸಂಬಿ, ಬಸವರಾಜ ಸಾಣಕ, ಶಿವಪ್ಪ ವಾರಿಕ, ಸಿದ್ಧರಾಮ ವಾಘ್ಮೋಡೆ, ಲಕ್ಕಪತಿ ಎಸ್. ಬೋಧನ್, ಮಹಾದೇವಿ ಘಂಟೆ, ಪಾರ್ವತಿ ಮಹಾಗಾಂವ ಇನ್ನಿತರರು ಪಾಲ್ಗೊಂಡಿದ್ದರು.