Advertisement

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

08:13 AM Oct 29, 2020 | mahesh |

ಹೊಸದಿಲ್ಲಿ: ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದವರು ಯಾರು? ಈ ಪ್ರಶ್ನೆಗೆ ಹಾರಿಕೆಯ ಉತ್ತರ ಕೊಟ್ಟಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿರುದ್ಧ ಕೇಂದ್ರ ಮಾಹಿತಿ ಆಯೋಗ ಗರಂ ಆಗಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ನಾಗರಿಕರು ಮೊಬೈಲ್‌ಗ‌ಳಲ್ಲಿ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಸಚಿವಾಲಯವೇ ಅಭಿವೃದ್ಧಿಪಡಿಸಿರುವುದು ಎಂದು ಆರೋಗ್ಯ ಸೇತು ವೆಬ್‌ಸೈಟ್‌ ಹೇಳುತ್ತದೆ. ಆದರೆ, ಆ್ಯಪ್‌ ಸೃಷ್ಟಿಕರ್ತರು ಯಾರು ಎಂಬ ಬಗ್ಗೆ ಮಾಹಿತಿಯೇ ಇಲ್ಲ ಎಂದು ಎನ್‌ಐಸಿ ಮತ್ತು ಐಟಿ ಇಲಾಖೆ ಹೇಳಿದೆ.

Advertisement

ಆ್ಯಪ್‌ ಅಭಿವೃದ್ಧಿಪಡಿಸಿದ್ದು ಯಾರು, ಅದರ ಕಡತಗಳು ಎಲ್ಲಿವೆ, ಆ್ಯಪ್‌ ಅನುಮತಿ ವಿವರಗಳು, ಒಳಗೊಂಡಿರುವ ಕಂಪನಿಗಳು, ವ್ಯಕ್ತಿಗಳು, ಸರ್ಕಾರಿ ಇಲಾಖೆಗಳ ಬಗ್ಗೆ ಮಾಹಿತಿ ಕೋರಿ ಆರ್‌ಟಿಐನಡಿ ಸೌರವ್‌ ದಾಸ್‌ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ, ಮಾಹಿತಿ ನೀಡಲು ಸಂಬಂಧಪಟ್ಟ ಪ್ರಾಧಿಕಾರ ನಿರಾಕರಿಸಿತ್ತು. ಇದರಿಂದ ಕೆಂಡಾಮಂಡಲವಾದ ರಾಷ್ಟ್ರೀಯ ಮಾಹಿತಿ ಆಯೋಗ, ಯಾವುದೇ ಪ್ರಾಧಿಕಾರ ಮಾಹಿತಿ ನೀಡದೇ ಸತಾಯಿಸುವುದನ್ನು ಒಪ್ಪಲಾಗದು. ನ.24ರಂದು ಸಂಬಂಧಪಟ್ಟ ಇಲಾಖೆ ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next