ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಮುಖ್ಯಸ್ಥರಾದ ಎಂ.ಆರ್.ಕುಮಾರ್ ಅವರ ಸೇವಾವಧಿಯನ್ನು ಸರ್ಕಾರ ಇನ್ನೊಂದು ವರ್ಷಕ್ಕೆ ವಿಸ್ತರಿಸಿದೆ.
ಹಾಗಾಗಿ, 2023 ಮಾರ್ಚ್‌ವರೆಗೆ ಅವರೇ ಮುಂದುವರಿಯಲಿದ್ದಾರೆ. ಇದರ ಜೊತೆಗೆ, ಎಲ್‌ಐಸಿ ಆಡಳಿತ ಮಂಡಳಿಯ ಸದಸ್ಯರಲ್ಲೊಬ್ಬರಾದ ರಾಜ್ ಕುಮಾರ್ ಅವರ ಸೇವಾವಧಿಯನ್ನೂ ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಅಂದಹಾಗೆ, ಎಂ.ಆರ್. ಕುಮಾರ್ ಅವರ ಅಧಿಕಾರಾವಧಿ ವಿಸ್ತರಣೆಯಾಗಿರುವುದು ಇದು ಎರಡನೇ ಬಾರಿ.ಕಳೆದ ವರ್ಷ ಎಲ್‌ಐಸಿಯನ್ನು ಷೇರು ಮಾರುಕಟ್ಟೆ ಪ್ರವೇಶಕ್ಕೆ ಅಣಿಗೊಳಿಸಬೇಕಾದ ಕಾರ್ಯ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ, ಆ ಸಂದರ್ಭದಲ್ಲಿ ಎಂ.ಆರ್. ಕುಮಾರ್ ಅವರ ಸೇವಾವಧಿಯನ್ನು ತಿಂಗಳವರೆಗೆ ವಿಸ್ತರಿಸಿತ್ತು.
ಇದನ್ನೂ ಓದಿ:ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು
ಹಾಗಾಗಿ, 2021ರ ಜೂ. 30ರಂದು ಮುಕ್ತಾಯವಾಗಬೇಕಿದ್ದ ಅವರ ಅಧಿಕಾರಾವಧಿ 2022ರ ಮಾ. 13ರವರೆಗೆ ವಿಸ್ತರಿಸಲಾಗಿತ್ತು. ಈಗ ಮತ್ತೊಮ್ಮೆ ಅವರ ಅಧಿಕಾರಾವಧಿ ವಿಸ್ತರಣೆಯಾಗಿದೆ.