Advertisement
ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಡಿರುವ ಸರಕಾರದ ವಿರುದ್ಧ ದೇಶದೆಲ್ಲೆಡೆ ಟೀಕೆ ವ್ಯಕ್ತವಾಗುತ್ತಿದ್ದು, ಪರಿಸ್ಥಿತಿ ಯನ್ನು ನಿಭಾಯಿಸುವುದರ ಕುರಿತು ಕಳವಳ ವ್ಯಕ್ತವಾಗುತ್ತಿದೆ.
ಆದರೆ ಸಮಸ್ಯೆಯನ್ನು ಪರಿಹರಿಸಲು ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಕೆಲವು ಅಧಿಕಾರಿಗಳೊಂದಿಗೆ ಸೇರಿ ಸರಕಾರದಿಂದ ಹೆಚ್ಚಿನ ಆರ್ಥಿಕ ನೆರವನ್ನು ಕೇಳಿದ್ದಕ್ಕೆ ಅವರನ್ನು ಕಾರ್ಯಪಡೆಯಿಂದ ಹೊರ ಹಾಕಲಾಗಿದೆ ಎನ್ನು ತ್ತಾರೆ ಸಂಸ್ಥೆಯ ಇತರೆ ಪರಿಣಿತರು.
ಡಾ| ಲುಟೋಮಿಯ ಅವರನ್ನು ವಜಾ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಸರ ಕಾರ, ಶಂಕಿತರ ಪರೀಕ್ಷಾ ಮಾದರಿಗಳನ್ನು ವೇಗವಾಗಿ ಪಡೆಯುವ ಉದ್ದೇಶ ನಮ್ಮದು ಎಂದಿದೆ.
1979 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಸಾಂಕ್ರಾಮಿಕ ರೋಗಗಳ ನಿಭಾವಣೆಯಲ್ಲಿ ತೊಡಗಿದೆ. ಮಲೇರಿಯಾ, ಎಚ್.ಐ.ವಿ. ಮತ್ತು ಕೋವಿಡ್-19ನ ಸೋಂಕಿನ ವಿರುದ್ಧದ ಹೋರಾಟದಲ್ಲೂ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವ ಹಿಸುತ್ತಿದೆ.
ಕೀನ್ಯಾದಲ್ಲಿ ಒಟ್ಟು 363 ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 14 ಮಂದಿ ಸಾವಿಗೀಡಾಗಿದ್ದಾರೆ. ಈ ಮಧ್ಯೆಯೇ ಬ್ರಿಟನ್‌ನಲ್ಲಿ ಸಿಲುಕಿಕೊಂಡಿರುವ ಕೀನ್ಯಾ ಪ್ರಜೆಗಳಿಗೆ ವಾಪಸು ಬರುವಂತೆ ಕೀನ್ಯಾ ಸರಕಾರ ಮತ್ತೂಂದು ಅವಕಾಶವನ್ನು ನೀಡಿದೆ. ಆಫ್ರಿಕನ್ ದೇಶಗಳಲ್ಲಿ ಕೀನ್ಯಾದಲ್ಲಿ ಸ್ವಲ್ಪ ಪರಿಸ್ಥಿತಿ ಪರವಾಗಿಲ್ಲ. ಉಳಿದಂತೆ ನೈಜೀರಿಯಾದಲ್ಲಿ 1,300ಕ್ಕೂ ಹೆಚ್ಚು ಪ್ರಕರಣಗಳಿದ್ದು, 40 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 4,700ಕ್ಕೂ ಹೆಚ್ಚು ಪ್ರಕರಣಗಳಲ್ಲಿ, 90 ಮಂದಿ ಸತ್ತಿದ್ದರೆ, ಘಾನಾದಲ್ಲಿ 1500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 11 ಮಂದಿ ಮರಣ ಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.