Advertisement

‘ಕಾಂತಾರ’ಪ್ರಭಾವ: ದೈವ ನರ್ತಕರಿಗೆ ಮಾಸಾಶನ ನೀಡಲು ಮುಂದಾದ ಸರ್ಕಾರ

12:23 PM Oct 20, 2022 | Team Udayavani |

ಬೆಂಗಳೂರು: ರಾಜ್ಯದ ಕರಾವಳಿ ಭಾಗದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೈವಾರಾಧನೆಯಲ್ಲಿ ತೊಡಗಿರುವ ಬಂಧುಗಳಿಗೆ ಮಾಸಾಶನ ನೀಡಲು ಸರ್ಕಾರ ನಿರ್ಧರಿಸಿದೆ.

Advertisement

ದೈವಾರಾಧನೆಯಲ್ಲಿ ನೇಮ ಕಟ್ಟುವವರಿಗೆ ಎರಡು ಸಾವಿರ ರೂ. ಮಾಸಾಶನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಪ್ರಕಟಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೈವಾರಾಧನೆ ಅಥವಾ ಭೂತಾರಾಧನೆ ತುಳುನಾಡಿನ ಸಂಸ್ಕೃತಿಯ ಪ್ರತೀಕಗಳಾಗಿವೆ. ಅದರಲ್ಲಿ ತೊಡಗಿರುವ 60 ವರ್ಷ ಮೇಲ್ಪಟ್ಟ ಬಂಧುಗಳಿಗೆ ಎರಡು ಸಾವಿರ ರೂ. ಮಾಸಾಶನ ನೀಡಲಾಗುವುದು ಎಂದರು.

ದೈವಾರಾಧನೆ ಮತ್ತು ಭೂತಾರಾಧನೆಯ ನರ್ತನದಲ್ಲಿ ತೊಡಗಿರುವ ಬಂಧುಗಳು ಅಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಇದನ್ನೂ ಓದಿ:ಭರ್ಜರಿ ಮೊತ್ತಕ್ಕೆ ಓಟಿಟಿಗೆ ಸೇಲಾಯ್ತು ಧನಂಜಯರ ‘ಹೆಡ್ ಬುಷ್’ ಸಿನಿಮಾ

Advertisement

ಇದಕ್ಕೂ ಮುನ್ನ ನಟ ಚೇತನ್ ಅಹಿಂಸ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತನಾಡಬಾರದು. ದೈವಾರಾಧನೆಗಳು ಹಿಂದೂ ಸಂಸ್ಕೃತಿಯ ಭಾಗಗಳೇ ಆಗಿವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರದಲ್ಲಿ ದೈವ ನರ್ತಕರ ಕುರಿತಾಗಿ ತೋರಿಸಲಾಗಿದೆ. ಚಿತ್ರ ಬಿಡುಗಡೆಯಾದ ಬಳಿಕ ತುಳುನಾಡಿನ ದೈವಾರಾಧನೆಯ ಬಗ್ಗೆ ಚರ್ಚೆ ಮೇಲ್ಪಂಕ್ತಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next