ನವದೆಹಲಿ: ದೇಶದ ಅತಿ ದೊಡ್ಡ ತೈಲ ಮತ್ತು ಅನಿಲ ಉತ್ಪಾದನಾ ಕ್ಷೇತ್ರಗಳ ಶೇ.60ರಷ್ಟು ಷೇರುಗಳನ್ನು ವಿದೇಶಿ ಕಂಪನಿಗಳಿಗೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ(ತೈಲ ಮತ್ತು ನೈಸರ್ಗಿಕ ಅನಿಲನಿಗ ಮ)ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೂಚಿಸಿದೆ.
ಜೊತೆಗೆ, ಮುಂಬೈನಲ್ಲಿರುವ ಒಎನ್‌ಜಿಸಿಗೆ ಸೇರಿದ ತೈಲ ಮತ್ತು ಅನಿಲ ಉತ್ಪಾದನಾ ವಲಯಗಳ ನಿರ್ವಹಣಾ ನಿಯಂತ್ರಣದಲ್ಲಿ ಒಂದಿಷ್ಟು ಪಾಲನ್ನು ವಿದೇಶಿ ಕಂಪನಿಗಳಿಗೆ ನೀಡುವಂತೆ ಅ.28ರಂದು ಕಂಪನಿಗೆ, ಸಚಿವಾಲಯದಿಂದ ಬಂದಿರುವ ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅಮರ್‌ನಾಥ್, ಒಎನ್‌ಜಿಸಿಯ ಮುಖ್ಯಸ್ಥರಾದ ಸುಭಾಷ್ ಕುಮಾರ್‌ರವರಿಗೆ ಮೂರು ಪುಟಗಳ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ, ಕಂಪನಿಯ “ಮುಂಬೈ ಹೈ ತೈಲ ಕ್ಷೇತ್ರ’ ಮತ್ತು “ಬ್ಯಾಸಿನ್ ಆ್ಯಂಡ್ ಸ್ಯಾಟಲೈಟ್’ (ಬಿ ಆ್ಯಂಡ್ ಎಸ್) ವ್ಯವಹಾರದಿಂದ ಆದಾಯ ಇಳಿಕೆಯಾಗಿದೆ.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ : ಸಿಎಂ ಘೋಷಣೆ
ಹಾಗಾಗಿ, ಈ ವ್ಯಾಪ್ತಿಯಲ್ಲಿರುವ ವ್ಯವಹಾರಗಳನ್ನು ಪರಭಾರೆ ಮಾಡುವ ನಿಟ್ಟಿನಲ್ಲಿ ಬಿಡ್ ಆಹ್ವಾನಿಸಬೇಕು. ಅಲ್ಲದೆ, ಶೇ.60ರಷ್ಟು ಷೇರುಗಳನ್ನು ವಿದೇಶಿ ಕಂಪನಿಗಳಿಗೆ ಪಾರ್ಟಿಸಿಪೇಟಿಂಗ್ ಇಂಟೆರೆಸ್ಟಿಂಗ್ (ಪಿಐ) ರೂಪದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಲಾಗಿದೆ.