Advertisement
ಬುಧವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, 13 ಸಾವಿರ ಹುದ್ದೆಗಳ ನೇಮಕಾತಿ ಜೊತೆಗೆ 5 ಸಾವಿರ ಹೊಸ ಬಸ್ ಖರೀದಿಸಲಾಗುವುದು. ಹುದ್ದೆಗಳ ನೇಮಕ, ಬಸ್ ಖರೀದಿ ನಂತರ ಕೊರೊನಾ ಕಾರಣಕ್ಕಾಗಿ ಗ್ರಾಮಾಂತರ ಭಾಗದಲ್ಲಿ ಸ್ಥಗಿತಗೊಳಿಸ ಲಾಗಿದ್ದ ಬಸ್ ಸಂಚಾರ ಪುನಾರಂಭಗೊಳಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಶಕ್ತಿ ಯೋಜನೆಯಡಿ ಜೂನ್ ನಲ್ಲಿ ಶೇ. 80 ರಷ್ಟು ಹಣ ಸಂದಾಯವಾಗಿದೆ. ಜುಲೈನಲ್ಲಿ 293 ಕೋಟಿ ಬಂದಿದೆ. ಇನ್ನೂ ಹಣ ಬರಬೇಕಿದೆ. ನಾಲ್ಕು ವಿಭಾಗದಿಂದ ಡೇಟಾ ನೀಡಿದ ತಕ್ಷಣವೇ ಹಣ ಬಿಡುಗಡೆ ಆಗುತ್ತದೆ. ಶಕ್ತಿ ಯೋಜನೆಗಾಗಿಯೇ 500 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ದೇವಾಲಯಗಳ ಅರ್ಚಕರಿಗೆ ನೇರವಾಗಿ ಹಣ ಸಂದಾಯ ಮಾಡಲು ಕಂದಾಯ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಕಾಂಗ್ರೆಸ್ ನಲ್ಲಿ ಫ್ರೀಬರ್ಡ್ ನಂತಿದ್ದವರಿಗೆ ಬಿಜೆಪಿಯಲ್ಲಿ ಉಸಿರು ಗಟ್ಟುವ ವಾತಾವರಣ ಇರುವ ಕಾರಣಕ್ಕೆ ಮತ್ತೆ ಕಾಂಗ್ರೆಸ್ ಗೆ ಬರುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನಮ್ಮ ಪಕ್ಷದಲ್ಲಿ ಫ್ರೀ ಬರ್ಡ್ ನಂತೆ ಓಡಾಡಿಕೊಂಡು ಇದ್ದವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇರುವ ಕಾರಣಕ್ಕೆ ಬಿಟ್ಟು ಬರುತ್ತಿದ್ದಾರೆ. ಅಲ್ಲಿ ಕೋಳಿಗಳನ್ನು ಕೆಜಿ ಗಟ್ಟಲೆ ತೂಕಕ್ಕೆ ಹಾಕುವಂತಹ ವಾತಾವರಣ ಇದೆ. ಹಾಗಾಗಿ ಮತ್ತೆ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಿಜೆಪಿಯವರು ಹತಾಶರಾಗಿ ಏನಾದರೂ ಮಾಡಿ ಶಕ್ತಿ ಇತರೆ ಯೋಜನೆಗಳ ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.