Advertisement

ಪರಿಶಿಷ್ಟ ಜಾತಿ-ವರ್ಗದ ಅಭಿವೃದ್ಧಿಗೆ ಸಿಎಂ ವಿಶೇಷ ಕಾಳಜಿ : ಗೋವಿಂದ ಕಾರಜೋಳ ಅಭಿನಂದನೆ

09:50 PM Mar 23, 2021 | Team Udayavani |

ಬೆಂಗಳೂರು. ಪರಿಶಿಷ್ಟ ಜಾತಿ ಮತ್ತು ಜನಾಂಗದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ಕಾಳಜಿ ಹೊಂದಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಭೂ ಒಡೆತನ ಯೋಜನೆಯಡಿ 4835 ಎಕರೆ ಜಮೀನು ಖರೀದಿ, ನೇರ ಸಾಲಯೋಜನೆಯಡಿ  1.42 ಲಕ್ಷ ಫಲಾನುಭವಿಗಳಿಗೆ ಸಹಾಯಧನದೊಂದಿಗೆ  ಸಾಲಸೌಲಭ್ಯ ನೀಡಲು ಮುಖ್ಯಮಂತ್ರಿಯವರು  ಮುಕ್ತ ಮನಸ್ಸಿನಿಂದ ಪ್ರಸ್ತಾವನೆಗಳನ್ನು ಅನುಮೋದಿಸಿ, ಅನುದಾನ ಬಿಡುಗಡೆ ಮಾಡಿದರು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಶ್ಲಾಘಿಸಿದರು.

Advertisement

ನಗರದಲ್ಲಿಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘವು ದಲಿತೋದ್ಯಮಕ್ಕಾಗಿ ಆರ್ಥಿಕ ಸವಲತ್ತು ನೀಡಿ ಪ್ರೋತ್ಸಾಹಿಸಿದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನಾ  ಸಮಾರಂಭದಲ್ಲಿ ಮುಖ್ಯಮಂತ್ರಿಗಳನ್ನು  ಸನ್ಮಾನಿಸಿದ ನಂತರ ಮಾತನಾಡಿದ ಅವರು, ಕೇವಲ ದಲಿತ ಉದ್ಯಮಿಗಳಿಗಷ್ಟೇ ಅಲ್ಲ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.

ಇದರಿಂದ ಮಹಿಳೆಯರು, ಹೂ- ತರಕಾರಿ ಮಾರುವವರು, ಕೃಷಿ ಪೂರಕ ಚಟುವಟಿಕೆ ಮಾಡುವವರು, ಕುಲಕಸುಬು ಮಾಡುವವರುಸ್ವಯಂ ಉದ್ಯೋಗ ಕೈಗೊಳ್ಳಲು ಆಸರೆಯಾಯಿತು. ಕಳೆದ 25 ವರ್ಷಗಳಲ್ಲಿ ಭೂ ಒಡೆತನ ಯೋಜನೆಯಡಿ ದಾಖಲೆಯಾಗುವಂತೆ ಭೂಮಿಯನ್ನು ಖರೀದಿಸಿ, ಪಲಾನುಭವಿಗಳ ಹೆಸರಿಗೆ ವರ್ಗಾಯಿಸಿ, ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಮುದಾಯದ ಮಕ್ಕಳ  ಶಿಕ್ಷಣಕ್ಕೆ ಆದ್ಯತೆ ನೀಡಿ, 173 ವಸತಿ ಶಾಲೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಅವುಗಳಲ್ಲಿ  ಈಗಾಗಲೇ 75 ಪೂರ್ಣಗೊಂಡಿವೆ. 2400  ವಸತಿ ನಿಲಯಗಳ ನಿರ್ಮಾಣ, ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಮುದಾಯದ ಕಲ್ಯಾಣಕ್ಕೆ ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದಾರೆ. ಅವರಿಗೆ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ಡಿಸಿಎಂ ತಿಳಿಸಿದರು.

ಸಮಾರಂಭದಲ್ಲಿ ಸಚಿವರಾದ ಶ್ರೀ ಜಗಧೀಶ ಶೆಟ್ಟರ್, ಶ್ರೀ ಸಿ.ಸಿ.ಪಾಟೀಲ್, ಶಾಸಕರಾದ ಶ್ರೀ ಹೆಚ್. ಕೆ. ಕುಮಾರಸ್ವಾಮಿ, ಶ್ರೀ ಎಂ. ಚಂದ್ರಪ್ಪ, ಶ್ರೀ ಎನ್. ಮಹೇಶ್, ಶ್ರೀ ಎಂ.ಪಿ. ಕುಮಾರ ಸ್ವಾಮಿ, ಡಾ. ಅವಿನಾಶ್ ಉಮೇಶ್ ಜಾಧವ್, ಶ್ರೀ ಹರ್ಷವರ್ಧನ್, ಶ್ರೀ ಎಂ. ಅಶ್ವಿನಿ ಕುಮಾರ್, ಅಪರ ಮುಖ್ಯಕಾರ್ಯದರ್ಶಿಗಳಾದ ಶ್ರೀ ಜಿ.ಕುಮಾರ ನಾಯಕ್, ಶ್ರೀ ಗೌರವ ಗುಪ್ತ, ಸಮಾಜ ಕಲ್ಯಾಣ ಇಲಾಖೆಯ ಎಸ್‍ಟಿಪಿ ಟಿಎಸ್ ಪಿ ಯೋಜನೆಯ ಸಲಹೆಗಾರರಾದ ಶ್ರೀ ವೆಂಕಟಯ್ಯ, ಮುಖ್ಯಮಂತ್ರಿಗಳ ಸಲಹೆಗಾರರಾದ ಶ್ರೀ ಲಕ್ಷ್ಮಿ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next