Advertisement

ಸೆನ್ಸಾರ್‌ನಲ್ಲಿ ಗೋವಿಂದ ಸುಮಂತ್‌ ಪಾಸ್‌!

03:57 PM Sep 04, 2020 | Suhan S |

‌ನಟ ಸುಮಂತ್‌ ಶೈಲೇಂದ್ರ ಅಭಿನಯದ “ಗೋವಿಂದ ಗೋವಿಂದ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. “ಶ್ರೀ ಶೈಲೇಂದ್ರ ಪ್ರೂಡಕ್ಷನ್ಸ್‌’, “ಎಲ್‌.ಜಿ ಕ್ರಿಯೇಶನ್ಸ್‌’ ಮತ್ತು “ರವಿ ಗರಣಿ ಪ್ರೂಡಕ್ಷನ್ಸ್‌’ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ತಿಲಕ್‌ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ “ಗೋವಿಂದ ಗೋವಿಂದ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ, ಚಿತ್ರಕ್ಕೆ ಯಾವುದೇ ಕಟ್ಸ್‌, ಮ್ಯೂಟ್ಸ್‌ ಇಲ್ಲದೆ “ಯು’ ಪ್ರಮಾಣ ಪತ್ರ ನೀಡಿದೆ.

Advertisement

“ಕಾಮಿಡಿ ಸಿನಿಮಾ ಮಾಡೋದೆ ಬಹಳ ಕಷ್ಟ. ಅದರಲ್ಲೂ ಕ್ಲೀನ್‌ ಕಾಮಿಡಿ ಮಾಡೋದು ಇನ್ನೂ ಕಷ್ಟ. ಇದೊಂದು ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌ – ಕಾಮಿಡಿ ಸಿನಿಮಾ. ಈ ಸಿನಿಮಾವನ್ನು ಇಡೀ ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡಿ ಎಂಜಾಯ್‌ ಮಾಡಬಹುದು. ಸಿನಿಮಾವನ್ನು ನೋಡಿದ ಸೆನ್ಸಾರ್‌ನವರು ಕೂಡ ಯಾವುದೇ ಬದಲಾವಣೆ ಇಲ್ಲದೇ “ಯು’ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಆದಷ್ಟು ಬೇಗ ಸಿನಿಮಾವನ್ನು ಆಡಿಯನ್ಸ್‌ ಮುಂದೆ ತರಲು ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ರವಿ ಆರ್‌. ಗರಣಿ.

“ಗೋವಿಂದ ಗೋವಿಂದ’ ಚಿತ್ರದಲ್ಲಿ ಸುಮಂತ್‌ ಶೈಲೇಂದ್ರ ಅವರಿಗೆ ಭಾವನಾ ಮೆನನ್‌, ಕವಿತಾ ಗೌಡ ನಾಯಕಿಯಾಗಿ ಕಾಣಿಸಿಕೊಂಡಿ ದ್ದಾರೆ. ಉಳಿದಂತೆ ರೂಪೇಶ್‌ ಶೆಟ್ಟಿ, ಅಚ್ಯುತ ಕುಮಾರ್‌, ಶೋಭರಾಜ್‌, ವಿ. ಮನೋಹರ್‌, ಪವನ್‌, ವಿಜಯ್‌ ಚೆಂಡೂರ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೆ.ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಸಿ. ರವಿಚಂದ್ರನ್‌ ಸಂಕಲನ, ಹಿತನ್‌ ಹಾಸನ್‌ ಸಂಗೀತವಿದೆ. ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಮೊದಲಾದ ಕಡೆಗಳಲ್ಲಿ “ಗೋವಿಂದ ಗೋವಿಂದ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಸದ್ಯ ಸೆನ್ಸಾರ್‌ನಿಂದ ಗ್ರೀನ್‌ ಸಿಗ್ನಲ್‌ ಸಿಕ್ಕ ಖುಷಿಯಲ್ಲಿರುವ ಚಿತ್ರತಂಡ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ಟೀಸರ್‌, ಆಡಿಯೋ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ನವೆಂಬರ್‌ ಅಥವಾ ಡಿಸೆಂಬರ್‌ ವೇಳೆಗೆ “ಗೋವಿಂದ ಗೋವಿಂದ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ­

Advertisement

Udayavani is now on Telegram. Click here to join our channel and stay updated with the latest news.

Next