Advertisement
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮ್ಯೂಸಿಯಂಗೆ ಭೇಟಿ ನೀಡಿ ಮ್ಯೂಸಿಯಂನಲ್ಲಿರುವ ಅಪೂರ್ವ ಪ್ರಾಗೈತಿಹಾಸಿಕ ಕಾಲದ ವಸ್ತುಗಳು ಮತ್ತು ಆ ಸಂದರ್ಭದಲ್ಲಿನ ಮಾಹಿತಿಗಳನ್ನು ತಿಳಿದುಕೊಂಡರು.
Related Articles
Advertisement
ದೇಶದಲ್ಲಿ ಆದಿಮಾನವನ ನೆಲೆಗಳನ್ನು ಗುರುತಿಸಿದ ಮೊದಲ ವ್ಯಕ್ತಿ ರಾಬರ್ತ್ ಬ್ರೂಸ್ ಫೂತ್ ಆಗಿದ್ದಾರೆ. ಸಂಗನಕಲ್ಲು ನವಶಿಲಾಯುಗದ ಕುರಿತು ಅಧ್ಯಯನ ಮಾಡಿದ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಪೂರ್ವ ಶಿಲಾಯುಗದ ಸ್ಥಳಗಳನ್ನು ಗುರುತಿಸಿದ, ಹಸುವಿನ ಸಗಣಿಯ ರಾಶಿಯಿಂದ ಸುಟ್ಟು ನಿರ್ಮಿಸಲಾಗಿರುವ ಬೂದಿ ದಿಬ್ಬಗಳು ನವಶಿಲಾಯುಗದ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಮೊದಲ ವ್ಯಕ್ತಿಯೂ ರಾಬರ್ತ್ ಬ್ರೂಸ್‌ಫೂತ್. ಈ ಹಿನ್ನೆಲೆಯಲ್ಲಿ ರಾಬರ್ತ್ ಬ್ರೂಸ್‌ಫೂತ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಎಂದು ಹೆಸರಿಡಲಾಗಿದೆ ಎಂದು ಮ್ಯೂಜಿಯಂ ಸಮಿತಿ ಸಹ ಅಧ್ಯಕ್ಷ ಹಾಗೂ ಹಿರಿಯ ಸಂಶೋಧಕ ಪ್ರೊ| ಕೋರಿಶೆಟ್ಟರ್ ಅವರು ವಿವರಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಇಡೀ ಮ್ಯೂಸಿಯಂ ಅನ್ನು ವೀಕ್ಷಿಸಿ ಮತ್ತು ಮಾಹಿತಿ ತಿಳಿದುಕೊಂಡು ಸಂತಸಪಟ್ಟರು. ಈ ಮ್ಯೂಸಿಯಂನ ಒಂದೊಂದು ಅಂಶಗಳನ್ನು ತಿಳಿದುಕೊಳ್ಳಬೇಕೆಂದರೇ ಕನಿಷ್ಠ ಮೂರುಗಂಟೆಗಳಾದರೂ ಬೇಕು ಎಂದರು. ಬಿಡುವು ಮಾಡಿಕೊಂಡು ಇನ್ನೊಮ್ಮೆ ಭೇಟಿ ನೀಡುವಂತೆ ಮ್ಯೂಸಿಯಂ ಸಮಿತಿ ಸದಸ್ಯರು ಮನವಿ ಮಾಡಿದಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರಾಬರ್ತ್ ಬ್ರೂಸ್ ಫೂತ್ ಮ್ಯೂಸಿಯಂ ವೆಬ್‌ಸೈಟ್‌ನ್ನು ರಾಜ್ಯಪಾಲರು ಲೋಕಾರ್ಪಣೆಗೊಳಿಸಿದರು. ನಂತರ ಮ್ಯೂಸಿಯಂ ಮುಂಭಾಗದಲ್ಲಿರುವ ಅಶೋಕನ ಶಿಲಾಶಾಸನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮ್ಯೂಸಿಯಂ ವತಿಯಿಂದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ರಾಜ್ಯಪಾಲರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿ ಕಾರಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜೆ.ಲಿಂಗಮೂರ್ತಿ, ಎಡಿಸಿ ಪಿ.ಎಸ್. ಮಂಜುನಾಥ, ಮ್ಯೂಸಿಯಂ ಸಮಿತಿ ಸದಸ್ಯರಾದ ಸಂತೋಷ ಮಾರ್ಟಿನ್, ಎಂ.ಅಹಿರಾಜ್, ಸಂಶೋಧನಾ ಸಂಯೋಜಕಿ ಸಂಜನಾ ರಂಜನ್, ಮ್ಯೂಸಿಯಂ ಸಿಬ್ಬಂದಿ ಗೌರಿ, ಸಮಿತಿ ಸದಸ್ಯ ಕಾರ್ಯದರ್ಶಿ ಸಿದ್ದಲಿಂಗೇಶ ರಂಗಣ್ಣನವರ್ ಇದ್ದರು.