Advertisement

ಕೋವಿಡ್-19 ಕೊನೆಯ ಹಂತದಲ್ಲಿದ್ದೇವೆ ಆದರೆ ಅಲಕ್ಷ್ಯ ಸರಿಯಲ್ಲ: ರಾಜ್ಯಪಾಲ ವಿ.ಆರ್.ವಾಲಾ

09:37 AM Jan 26, 2021 | Team Udayavani |

ಬೆಂಗಳೂರು: ನಾವೀಗ ಕೋವಿಡ್-19 ಕೊನೆಯ ಹಂತಕ್ಕೆ ತಲುಪಿದ್ದೇವೆ. ಹಾಗೆಂದು, ಕೋವಿಡ್ ಸೋಂಕಿನ ಬಗ್ಗೆ ಅಲಕ್ಷ್ಯ ಸರಿಯಲ್ಲ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು.

Advertisement

ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಜನತೆಗೆ ಸಂದೇಶ ನೀಡಿರು ಅವರು, ಕೋವಿಡ್ ಕೊನೆಯ ಹಂತಕ್ಕೆ ತಲುಪಿದ್ದರೂ ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡುವುದು, ಮುಖಗವಸು ಧರಿಸುವುದು ಮತ್ತು ಸ್ಯಾನಿಟೈಜರ್ ಬಳಕೆ ತಪ್ಪದೇ ಮಾಡಬೇಕು. ಈ ಮೂರು ಮಂತ್ರವನ್ನು ನಿರಂತರವಾಗಿ ಪಾಲಿಸಬೇಕು ಎಂದರು.

ಇದನ್ನೂ ಓದಿ:LIVE ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ; ಶುಭ ಹಾರೈಸಿದ ರಾಷ್ಟ್ರಪತಿ, ಪ್ರಧಾನಿ

ಸರ್ಕಾರಿ ಶಾಲೆಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸಲು ನನ್ನ ಶಾಲೆ, ನನ್ನ ಕೊಡುಗೆ ಮೊಬೈಲ್ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ. ಕರ್ನಾಟಕವು ರಾಷ್ಟ್ರದಲ್ಲಿಯೇ ಹಾಲು ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ ಎಂದರು.

ಎಲ್ಲ ಗ್ರಾಮಪಂಚಾಯತಿಗಳಲ್ಲಿ 6544 ಜೀವ ವೈವಿದ್ಯ ನಿರ್ವಹಣಾ ಸಮಿತಿಗಳನ್ನು(ಬಿಎಂಸಿ) ರಚಿಸಲಾಗಿದೆ. 6439 ಜೀವ ವೈವಿದ್ಯ ರಿಜಿಸ್ಟ್ರಾರಗಳು ಜೀವ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ. ಕಲಬುರ್ಗಿ ಮತ್ತು ಚಿಂಚೋಳಿ ಎಪಿಎಂಸಿಗಳನ್ನು ಕೇಂದ್ರ ಸರ್ಕಾರದ ಇ-ನಾಮ್ ಪ್ಲಾಟ್ ಫಾರ್ಮ್ ಜೋಡಿಸಲಾಗಿದೆ. ಇನ್ನು ಮೂರು ಎಪಿಎಂಸಿಗಳನ್ನು ಇ-ನಾಮ್ ಪ್ಲಾಟ್ ಫಾರ್ಮ್ ಗೆ ಜೋಡಿಸಲಾಗುತ್ತದೆ. ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಎಪಿಎಂಸಿಗಳಲ್ಲಿ ಮಾರುಕಟ್ಟೆ ಶುಲ್ಕವನ್ನು ಶೇ.0.06ಕ್ಕೆ ಇಳಿಸಲಾಗಿದೆ ಎಂದರು.

Advertisement

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್, ಡಿಜಿ ಪ್ರವೀಣ್ ಸೂದ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮೊದಲಾದವರು ಇದ್ದರು.

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಪಥಸಂಚಲನ ಇಲ್ಲದೇ ಅತ್ಯಂತ ಸರಳವಾಗಿ ಕೋವಿಡ್ ನಿರ್ವಹಣಾ ಕ್ರಮದಂತೆ ಗಣರಾಜ್ಯೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next