Advertisement

ಹಳ್ಳಿಯಲ್ಲಿಯೇ ಪ್ರಗತಿ ಹೊಂದುವ ಮಂತ್ರವನ್ನು ಗ್ರಾಮಸ್ಥರಿಗೆ ನೀಡಬೇಕು: ರಾಜೇಂದ್ರ ಅರ್ಲೆಕರ್

05:42 PM Dec 13, 2021 | Team Udayavani |

ಪಣಜಿ: ಗೋವಾದಲ್ಲಿ ಪೆಡ್ನೆ ಸೇರಿದಂತೆ ವಿವಿಧ ಹಿಂದುಳಿದ ತಾಲೂಕುಗಳ ಮುದ್ರೆಯನ್ನು ಅಳಿಸುವ ಕೆಲಸವನ್ನು ಭೂಮಿಪುತ್ರರು ಮಾಡಬೇಕು ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಕರೆ ನೀಡಿದರು.

Advertisement

ಕಾಣಕೋಣದಲ್ಲಿ ಆಯೋಜಿಸಿದ್ದ ಲೋಕೋತ್ಸವ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು- ಪ್ರಗತಿ ಎಂದರೆ ಹಳ್ಳಿ ಬಿಟ್ಟು ಹೋಗುವುದಲ್ಲ. ಹಳ್ಳಿಯಲ್ಲಿಯೇ ಪ್ರಗತಿ ಹೊಂದುವ ಮಂತ್ರವನ್ನು ಗ್ರಾಮಸ್ಥರಿಗೆ ನೀಡಬೇಕು. ದೇಶವನ್ನು ಮುನ್ನೆಡೆಸುವುದೇ ಪ್ರಧಾನಿ ನರೇಂದ್ರ ಮೋದಿಯವರ ಗುರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಮಾತನಾಡಿ- ಆಯುಷ್ ಸಚಿವಾಲಯದ ಆಯುರ್ವೇದ ಸಸ್ಯ ಕೃಷಿ ಯೋಜನೆಯಿಂದ ರೈತರು ಶ್ರೀಮಂತರಾಗಬಹುದು. ಇಂದಿಗೂ ಕಾಡಿನಲ್ಲಿರುವ ಔಷಧಿ ಸಸ್ಯಗಳನ್ನು ಕಡಿಯಲಾಗುತ್ತಿದೆ. ವಿಶ್ವದ ವಿವಿಧ ದೇಶಗಳು ಆಯುರ್ವೇದ ಔಷಧ ಪದ್ಧತಿಗಾಗಿ ಭಾರತದತ್ತ ಎದುರು ನೋಡುತ್ತಿವೆ. ಭವಿಷ್ಯದಲ್ಲಿ ಆ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಈಗ ಹೆಚ್ಚಿನ ಪ್ರಯತ್ನ ಅಗತ್ಯವಿದೆ ಎಂದರು.

ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 45 ಜನ ಗಣ್ಯರನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next