Advertisement

Kollur ಮೂಕಾಂಬಿಕೆ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್

12:25 AM Oct 11, 2023 | Team Udayavani |

ಕೊಲ್ಲೂರು: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಮಂಗಳವಾರ ಮಧ್ಯಾಹ್ನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Advertisement

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್‌ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ರಾಜ್ಯಪಾಲರನ್ನು ಪೂರ್ಣಕುಂಭ ಸ್ವಾಗತದೊಡನೆ ಬರಮಾಡಿಕೊಂಡರು. ಅರ್ಚಕರಾದ ಡಾ| ಕೆ.ಎನ್‌. ನರಸಿಂಹ ಅಡಿಗ, ಶ್ರೀಧರ ಅಡಿಗ, ಕೆ.ಎನ್‌. ಗೋವಿಂದ ಅಡಿಗ, ಡಾ| ರಾಮಚಂದ್ರ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು.

ದೇಗುಲದ ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ್‌, ಶೇಖರ ಪೂಜಾರಿ, ಗೋಪಾಲಕೃಷ್ಣ ನಾಡ, ರತ್ನಾ ಆರ್‌. ಕುಂದರ್‌, ಸಂಧ್ಯಾರಮೇಶ, ದೇಗುಲದ ಎಂಜಿನಿಯರ್‌ ಪ್ರದೀಪ್‌ ಡಿ.ಕೆ. ಉಪಸ್ಥಿತರಿದ್ದರು. ಬಿಗು ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ರಾಜ್ಯಪಾಲರ ಭೇಟಿ ಸಂದರ್ಭ ಶ್ರೀ ದೇವಿಯ ದರ್ಶನಕ್ಕೆ ಇತರ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next