Advertisement
ಪೆಟ್ರೋಲಿಯಂ ಬೆಲೆಯನ್ನು ಕಡಿತಗೊಳಿಸಲು ಯಾವ್ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಪೆಟ್ರೋಲಿಯಂ ಸಚಿವಾಲಯವು ವಿತ್ತ ಸಚಿವಾಲಯದ ಜತೆ ಚರ್ಚಿಸುತ್ತಿದೆ. ಇಂಧನ ಬೆಲೆ ಗ್ರಾಹಕರ ಜೇಬು ಸುಡಲು ಅತ್ಯಧಿಕ ತೆರಿಗೆಯೂ ಕಾರಣವಾಗಿದ್ದು, ತೆರಿಗೆ ಕಡಿತ ಮಾಡುವ ಮೂಲಕ ಜನಸಾಮಾನ್ಯರ ಹೊರೆ ಇಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
Related Articles
Advertisement
ಈಗ ಪೂರೈಕೆಗಿಂತಲೂ ಬೇಡಿಕೆ ಹೆಚ್ಚಿರುವ ಕಾರಣ ಬೆಲೆಯೂ ಹೆಚ್ಚಿದೆ. ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೈಲ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ತೈಲ ಉತ್ಪಾದಕ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಒಪೆಕ್ ರಾಷ್ಟ್ರಗಳಿಗೆ ಭಾರತ ಮನವಿ ಮಾಡಿದೆ.
ತೆರಿಗೆ ಸುಲಿಗೆ: ರಾಹುಲ್ ಆರೋಪಪೆಟ್ರೋಲ್-ಡೀಸೆಲ್ ಬೆಲೆಯು ವೈಮಾನಿಕ ಇಂಧನ ಬೆಲೆಯನ್ನೂ ಮೀರಿಸಿದ ಬೆನ್ನಲ್ಲೇ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಕೇಂದ್ರ ಸರಕಾರವು ಜನರಿಂದ ತೆರಿಗೆ ಸುಲಿಗೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಪ್ರಿಯಾಂಕಾ ವಾದ್ರಾ ಅವರೂ ಟ್ವೀಟ್ ಮಾಡಿ, “ಹವಾಯಿ ಚಪ್ಪಲಿ ಧರಿಸುವವರನ್ನು ವಿಮಾನದಲ್ಲಿ ಹಾರುವಂತೆ ಮಾಡುತ್ತೇನೆ ಎಂದಿದ್ದ ಸರಕಾರ, ಈಗ ಜನರು ರಸ್ತೆಯಲ್ಲೂ ಸಂಚರಿಸದಂತೆ ಮಾಡಿಬಿಟ್ಟಿದೆ’ ಎಂದಿದ್ದಾರೆ.