Advertisement

ರೈತರ ಉತ್ಪನ್ನ ಸರ್ಕಾರ ಖರೀದಿಸಲಿ: ಡಿ.ಕೆ.ಶಿವಕುಮಾರ್‌

04:42 PM Apr 24, 2020 | Team Udayavani |

ಶಿಡ್ಲಘಟ್ಟ: ಕೋಲಾರ-ಚಿಕ್ಕಬಳ್ಳಾಪುರ ಸಹಿತ ರಾಜ್ಯದ ರೈತರು ಬೆಳೆದಿರುವ ತರಕಾರಿ-ಹೂ ಹಣ್ಣುಗಳನ್ನು ಕೇಳುವವರು ಇಲ್ಲದಂತಾಗಿದೆ. ಸರ್ಕಾರ ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸ ಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

Advertisement

ಬೆಂಗಳೂರಿನಲ್ಲಿ ಕೆಪಿಸಿಸಿ ಕೋವಿಡ್‌ -19 ಪರಿಹಾರ ನಿಧಿಗೆ ಶಾಸಕ ವಿ.ಮುನಿಯಪ್ಪ ಅವರಿಂದ 2.5 ಲಕ್ಷ ರೂ. ಪರಿಹಾರದ ಡಿಡಿ ಸ್ವೀಕರಿಸಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತ ರ್ಜಲ ಮಟ್ಟ 1500 ರಿಂದ 1800 ಅಡಿಗೆ ಕುಸಿದಿದೆ. ಆದರೂ ಸಹ ರೈತರು ಬೆಳೆದಿರುವ ತರಕಾರಿ,ದ್ರಾಕ್ಷಿ, ಕ್ಯಾಪ್ಸಿಕಾಂ, ಹೂ ಹಣ್ಣುಗಳು ಕೇಳುವವರು ಇಲ್ಲದಂತಾ ಗಿದೆ. ಇದೇ ಪರಿಸ್ಥಿತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಅನುಭವಿಸುತ್ತಿದ್ದಾರೆ. ಆದರೆ  ಸರ್ಕಾರ ರೈತರು ಎಷ್ಟು ಎಕರೆ ಪ್ರದೇಶದಲ್ಲಿ ಏನು ಬೆಳೆ ಇಟ್ಟಿದ್ದಾರೆ ಎಂಬುದು ಪರಿಶೀಲಿಸಲು ಗೋಜಿಗೆ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಹಾಗೂ ಮಾಜಿ ಸಚಿವ ವಿ. ಮುನಿಯಪ್ಪ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರು ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರ ತೋಟಗಳಿಗೆ ತೆರಳಿ ತರಕಾರಿ ಖರೀದಿಸಿ ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಿ ಮಾದರಿ ಸೇವೆ ಮಾಡುತ್ತಿದ್ದಾರೆ. ಸರ್ಕಾರ ಸಹ ಇದೇ ಮಾದರಿಯಲ್ಲಿ ರೈತರು ಬೆಳೆದಿರುವ ಉತ್ಪನ್ನಗಳನ್ನು ಖರೀದಿಸಿ ಜೊತೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಕೆವಿಕೆ ನಿರ್ದೇಶಕ ವಿ. ಸುಬ್ರಹ್ಮಣಿ, ಡಿಸಿಸಿ ಅಧ್ಯಕ್ಷ ಕೇಶವರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next