Advertisement

ಸರ್ಕಾರ ಪಾನ ನಿಷೇಧ ಕಾರ್ಯಕ್ಕೆ ಕೈಹಾಕಬೇಕು

12:39 PM Jul 05, 2017 | Team Udayavani |

ತಿ.ನರಸೀಪುರ: ಮದ್ಯಪಾನ ವ್ಯಸನದಂತಹ ಸಾಮಾಜಿಕ ಪಿಡುಗು ದೂರವಾಗಬೇಕಾದರೆ ಸರ್ಕಾರ ಪಾನ ನಿಷೇಧದಂತಹ ಕಾರ್ಯಕ್ಕೆ ಕೈಹಾಕಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ  ಎ. ಶ್ರೀಹರಿ ಅಭಿಪ್ರಾಯಪಟ್ಟರು.

Advertisement

ಹಳೇ ತಿರುಮಕೂಡಲಿನ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ನಡೆದ 1067ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ದೇಶದಲ್ಲಿ ಬೆರಳೆಣಿಕೆ ರಾಜ್ಯಗಳು ಮಾತ್ರ ಸಂಪೂರ್ಣ  ಪಾನ ನಿಷೇಧದ ದಿಟ್ಟ ಹೆಜ್ಜೆ ಇಟ್ಟಿವೆ. ಬಹುತೇಕ ರಾಜ್ಯಗಳಲ್ಲಿ ಕುಡಿತದ ಸಮಸ್ಯೆ ಹಾಗೆ ಉಳಿಯುತ್ತಿದೆ. ಇದಕ್ಕೆ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ ಎಂದರು.

ಮದ್ಯಪಾನದಂತಹ ಹಲವು ಚಟಗಳಿಗೆ ಪ್ರೇರೇಪಣೆಯಾಗುವ ಪರಿಸ್ಥಿತಿಗಳು ಸಮಾಜದಲ್ಲಿವೆ. ಇದನ್ನು ಮೆಟ್ಟಿ  ನಿಲ್ಲಲು ಸರ್ಕಾರಗಳು ಜನರ ಅಭಿವೃದ್ಧಿಯ ಚಿಂತನೆಯಿಂದ ಪಾನ ನಿಷೇಧದ ಕೆಲಸ ಮಾಡಬೇಕು. ಚಟಕ್ಕೆ ಬಿದ್ದವರನ್ನು ಸರಿ ದಾರಿಗೆ ತರಬೇಕಾದರೆ ಅವರ ಹೃದಯ ಮುಟ್ಟುವಂತಹ ಅಥವಾ ಅವರ ಅಂತರಂಗವನ್ನು ಬೇಧಿಸಿ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಸಿ. ಚಾಮೇಗೌಡ ಮಾತನಾಡಿ, ಹಳ್ಳಿಗಳಲ್ಲಿ ಕುಡಿತದಿಂದ ಮನೆ, ಜಮೀನು ಕಳೆದುಕೊಂಡ ಅನೇಕ ಜನರಿದ್ದಾರೆ. ಇಂತಹ ಕೆಟ್ಟ ಚಟದಿಂದ ಬದುಕನ್ನು ನಾಶ ಮಾಡಿಕೊಂಡಿದ್ದಾರೆ. ಇಂತಹ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಡಿತದ ದಾಸ್ಯಕ್ಕೆ ಒಳಗಾದವರನ್ನು ಕರೆ ತಂದು ಶಿಬಿರದ ಮೂಲಕ ಅವರಲ್ಲಿ ಪರಿವರ್ತನೆಗೆ ಮುಂದಾಗಿರುವುದು ನಿಜಕ್ಕೂ ಶ್ರಮದ ಕೆಲಸ, ಅದನ್ನು ಸಮರ್ಥವಾಗಿ ಮಾಡಿದ್ದಾರೆ ಎಂದರು.

ಸಾನಿಧ್ಯ ವಹಿಸಿ ವಾಟಾಳು ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.  ಶಿಬಿರದ ಅಧ್ಯಕ್ಷ ಕಿರಗಸೂರು ಶಂಕರ್‌, ಅಖೀಲ ಕರ್ನಾಟಕ ಜನಜಾಗೃತಿ ಜಿಲ್ಲಾ ಸದಸ್ಯ ರಾದ ಕೆ. ಎನ್‌. ಪ್ರಭುಸ್ವಾಮಿ, ಹೊನ್ನನಾಯಕ, ತಿಮ್ಮಯ್ಯನಾಯ್ಕ, ಯೋಜನಾಧಿಕಾರಿ ಸುನೀತಾ ಪ್ರಭು, ಮೇಲ್ವಿಚಾರಕರಾದ ಸಂದೇಶ್‌, ಯೋಗೀಶ್‌ ಸೇವಾ ಪ್ರತಿನಿಧಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next