Advertisement

ಬ್ಯಾಂಕ್‌ಗಳಲ್ಲಿ ಸರಕಾರದ ಪಾಲು ಶೇ.26ಕ್ಕೆ ಇಳಿಕೆ?

09:21 AM Aug 01, 2020 | mahesh |

ಹೊಸದಿಲ್ಲಿ: 4-5 ಬ್ಯಾಂಕ್‌ಗಳನ್ನು ಹೊರತು­ಪಡಿಸಿ ಬಹುತೇಕ ಸರ್ಕಾರಿ ಬ್ಯಾಂಕ್‌ಗಳನ್ನು ಖಾಸಗೀಕರಣ ಗೊಳಿಸಲಾಗುತ್ತದೆ ಎಂಬ ಮಾತು ಹಲವು ದಿನಗ­ಳಿಂದ ಕೇಳಿ ಬರುತ್ತಿದೆ. ಇದೀಗ ಮೂಲಗಳಿಂದ ಇನ್ನೊಂದು ಮಹತ್ವದ ಸಂಗತಿ ಹೊರಬಿದ್ದಿದೆ. ಸರಕಾರಿ ಬ್ಯಾಂಕ್‌ಗಳಲ್ಲಿ, ಸರಕಾರ ದ ಪಾಲನ್ನು ಶೇ.26ಕ್ಕೆ ಇಳಿಸುವಂತೆ ಆರ್‌ಬಿಐ ಸಲಹೆ ನೀಡಿದೆ, ಅಷ್ಟು ಮಾತ್ರವಲ್ಲ ಬ್ಯಾಂಕ್‌ ಮುಖ್ಯಸ್ಥರಿಗೆ ದೀರ್ಘ‌ಕಾಲ ಅಧಿಕಾರ­ದಲ್ಲಿರಲು ಅವಕಾಶ ನೀಡುವಂತೆಯೂ ತಿಳಿಸಿದೆ ಎನ್ನಲಾಗಿದೆ. ಸರಕಾರದ ಪಾಲನ್ನು ಕಡಿಮೆಗೊಳಿಸಿದರೆ ಬ್ಯಾಂಕ್‌ಗಳನ್ನು ಇನ್ನಷ್ಟು ರಚನಾತ್ಮಕವಾಗಿ, ವೃತ್ತಿಪರವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ದೇಶದ ಪ್ರಮುಖ ಬ್ಯಾಂಕ್‌ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ನಡೆಸಿದ ಸಭೆಯಲ್ಲಿ ಆರ್‌ಬಿಐ ತಿಳಿಸಿದೆ ಎಂದು ವರದಿಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next