ಆಳಂದ: ಹೊಸದಾಗಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗ್ರಾಮ ಇನ್ ಒನ್ ಸೇವಾ ಕೇಂದ್ರ ಆರಂಭಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ನಿಂಬರಗಾ ನಾಡ ತಹಶೀಲ್ದಾರ್ ಆರ್. ಮಹೇಶ ಹೇಳಿದರು.
ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಆರಂಭಿ ಸಲಾದ ಗ್ರಾಮ ಒನ್ ಸೇವಾ ಕೇಂದ್ರದ ಉದ್ಘಾಟನೆ ಸಮಾರಂಭದದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ತರ ಕಾರ್ಯಕ್ರಮಗಳಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವು ಒಂದಾಗಿದೆ. ಇದರಿಂದ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಈ ಸೇವಾ ಕೇಂದ್ರದಲ್ಲಿ ಗ್ರಾಮೀಣ ಭಾಗದ ಜನರಿಗೆ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅನೇಕ ಸೇವೆಗಳು ಕಡಿಮೆ ದರದಲ್ಲಿ ದೊರೆಯಲಿದೆ. ನಾಗರಿಕರೆಲ್ಲರೂ ಗ್ರಾಮ ಒನ್ ಕೇಂದ್ರದ ಸದುಪಯೋಗ ಪಡೆಯಲಿ ಎಂದರು.
ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನತೆಗೆ ಒಂದೇ ಸೂರಿನಡಿ ಹಲವು ಸೇವೆಗಳು ಸಿಗೋದರಿಂದ ಅನುಕೂಲವಾಗಲಿದೆ. ಆರ್ಥಿಕ ವಾಗಿಯೂ ನಾಗರಿಕರಿಗೆ ಸವಲತ್ತು ಸಿಗುತ್ತದೆ ಎಂದರು. ಗ್ರಾಪಂ ಸದಸ್ಯ ಚಂದ್ರಕಾಂತ ಮಠಪತಿ ಮಾತನಾಡಿ, ಕಡಿಮೆ ಶುಲ್ಕದಲ್ಲಿ ಹಲವು ಸೇವೆಗಳು ಗ್ರಾಮ ಒನ್‌ನಲ್ಲಿ ದೊರೆಯುತ್ತವೆ ಎಂದರು.
ಗ್ರಾಮ ಇನ್ ಒನ್ ಕೇಂದ್ರದ ಬಸವರಾಜ ಯಳಸಂಗಿ ಮಾತನಾಡಿ, ಈ ಸೇವಾ ಕೇಂದ್ರವನ್ನು ಹಣಗಳಿಕೆ ಉದ್ದೇಶದಿಂದ ಆರಂಭಿಸಿಲ್ಲ. ಜನರು ಆರ್ಥಿಕವಾಗಿ ಉಳಿತಾಯ ಮಾಡಬೇಕು. ಅವರಿಗೆ ಸೇವೆ ಒದಗಿಸಬೇಕು ಎನ್ನುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಯುವ ಮುಖಂಡ ಅಮೃತ ಬಿಬ್ರಾಣಿ, ಶರಣು ಸರಸಂಬಿ, ಜಗಯ್ಯ ಸ್ವಾಮಿ, ಮೋಹನ ರಾಠೊಡ, ಶಾಂತಪ್ಪ ಮಾಲಿಪಾಟೀಲ, ಶ್ರೀಶೈಲ ಮಾಲಿಪಾಟೀಲ, ಶರಣು ಬೆಳ್ಳಿ, ನಾಗರಾಜ ಪಾಟೀಲ, ರಾಮಚಂದ್ರ ದುಗೊಂಡ, ಸಂಜೀವಕುಮಾರ ಮಂಟಗಿ, ಶರಣು ಗುರಾಮಳಿ, ಶಿವಲಿಂಗಪ್ಪ ದುಗೊಂಡ, ಕಲ್ಯಾಣಿ ನಿರ್ಮಲ್ಕರ್, ಅಂಬೇಡ್ಕರ್ ತೋಳಿ ಇನ್ನಿತರರು ಇದ್ದರು. ಸ್ಥಳದಲ್ಲೇ ಅನೇಕರಿಗೆ ಅರ್ಜಿ ದಾಖಲಿಸಿಕೊಂಡು ಆಯುಷ್ಯಮಾನ್ ಭಾರತ ಆರೋಗ್ಯ ಕಾರ್ಡ್ ಸೇರಿದಂತೆ ಹಲವು ರೀತಿಯ ಸೌಲಭ್ಯಗಳ ಕುರಿತು ಅನೇಕರಿಗೆ ರಸೀದಿ ನೀಡಲಾಯಿತು.