Advertisement
ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿ ವರೆಗೆ ಪ್ರಸ್ತುತ 125 ಮಕ್ಕಳು ಶಿಕ್ಷಣ ಪಡೆಯು ತ್ತಿದ್ದಾರೆ. ಸರ್ಕಾರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಮನೆಗೊಂದು ಶೌಚಾಲಯವೆಂದು ಕೋಟ್ಯಂತರ ರೂ. ಪ್ರಚಾರಕ್ಕಾಗಿ ಖರ್ಚು ಮಾಡುತ್ತಿದೆ. ಆದರೆ, ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುವ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಉತ್ತಮ ಶೌಚಾಲ ಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿರುವುದು ದುರಂತ ಎಂಬ ಆರೋಪಗಳು ಕೇಳಿಬರುತ್ತಿವೆ.
Related Articles
Advertisement
ಶತಮಾನದ ಶಾಲೆ: ಪಟ್ಟಣದ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳನ್ನು ಸಾಧಕ ರನ್ನಾಗಿ ಮಾಡಿದ ಈ ಶಾಲೆ 1904ರಲ್ಲಿ ಪ್ರಾರಂಭ ವಾಗಿ 2004ರಲ್ಲಿ ಶತಮಾನೋತ್ಸವವನ್ನು ಆಚರಿಸಿ ಕೊಂಡಿದೆ. ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಗಳು ತಾಲೂಕಿನಲ್ಲಿ ಗ್ರಾಪಂ ಸದಸ್ಯರು, ಪುರಸಭೆ ಸದಸ್ಯರು, ತಾಪಂ, ಜಿಪಂ ಸದಸ್ಯರು ಹಾಗೂ ಶಾಸಕರು, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಈ ಶಾಲೆಯಲ್ಲಿ ಇಂದು ಉತ್ತಮ ಶೌಚವಿಲ್ಲ.
ಶಾಸಕರೇ ಸ್ಪಂದಿಸಿ: ಪಟ್ಟಣದ ಈ ಶಾಲೆ ಬಗ್ಗೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಗಮನ ಹರಿಸಿ, ಶಾಸಕರ ಅನುದಾನ ಅಥವಾ ಯಾವುದಾದರೂ ರೂಪದಲ್ಲಿ ನೆರವು ನೀಡಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕೆಂಬುದು ಪೋಷಕರ ಆಗ್ರಹ.
ಕ್ರಮದ ಭರವಸೆ: ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಪ್ರತಿಕ್ರಿಯಿಸಿ ಶೌಚಾಲಯ ತೀರಾ ಶಿಥಿಲಾವಸ್ಥೆ ಯಲ್ಲಿದ್ದು, ದುರಸ್ತಿ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಶಿವಪ್ರಕಾಶ್ ಪ್ರತಿಕ್ರಿಯಿಸಿ, ತಕ್ಷಣ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿ ಸುತ್ತೇವೆ ಎಂದು ಭರವಸೆ ನೀಡಿದರು.
ಆರ್.ಕೊಟ್ರೇಶ್