Advertisement

ಸ್ಯಾಂಪಲ್‌ ಸಾಮೂಹಿಕ ಪರೀಕ್ಷೆಗೆ ಮಾರ್ಗಸೂಚಿ

08:36 AM May 16, 2020 | Hari Prasad |

ವಲಸೆ ಕಾರ್ಮಿಕರು ಮತ್ತು ವಿದೇಶದಿಂದ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿರುವವರನ್ನು ಒಂದೇ ಬಾರಿಗೆ ಆರ್‌ಟಿ – ಪಿಸಿಆರ್‌ ಆಧರಿತ ಸ್ಯಾಂಪಲ್‌ ಪೂಲಿಂಗ್‌ ಮೂಲಕ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ಅಷ್ಟೇ ಅಲ್ಲ, ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗದಿರುವಂಥ ಹಸುರು ವಲಯಗಳಲ್ಲಿ ಮತ್ತು ಕಳೆದ 21 ದಿನಗಳಿಂದ ಹೊಸ ಪ್ರಕರಣ ಪತ್ತೆಯಾಗದಂಥ ಪ್ರದೇಶಗಳಲ್ಲೂ ಇದೇ ಪರೀಕ್ಷಾ ವಿಧಾನ ಅನುಸರಿಸಲು ನಿರ್ಧರಿಸಲಾಗಿದೆ.

ಈ ಸಾಮೂಹಿಕ ಪರೀಕ್ಷೆಯ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದೆ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರ ಅಥವಾ ಹೋಟೆಲ್‌ ಗಳಲ್ಲಿ ಕ್ವಾರಂಟೈನ್‌ನಲ್ಲಿರುವ ಕಾರ್ಮಿಕರು ಹಾಗೂ ವಿದೇಶದಿಂದ ವಾಪಸಾದ ಭಾರತೀಯರು ಮತ್ತು ಹಸುರು ವಲಯಗಳಲ್ಲಿರುವ ಜನರನ್ನು ಈ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಹೇಗೆ ನಡೆಯುತ್ತದೆ ಪರೀಕ್ಷೆ?
– 25 ಜನರ ತಂಡವನ್ನು ಗುರುತಿಸಿ, ಅವರ ಗಂಟಲ ದ್ರವ ಮಾದರಿ ಸಂಗ್ರಹ.

– ಪ್ರತಿಯೊಬ್ಬರ ಹೆಸರು, ವಯಸ್ಸು, ಲಿಂಗ, ಮಾದರಿ ಗುರುತಿನ ಸಂಖ್ಯೆಯನ್ನು ಭರ್ತಿ ಮಾಡಲಾಗುತ್ತದೆ.

Advertisement

– ತಂಡದ ಗಂಟಲು ದ್ರವದ ಮಾದರಿಯನ್ನು ಮೂರು ಪದರಗಳ ಪ್ಯಾಕೇಜಿಂಗ್‌ನಲ್ಲಿ ಪ್ಯಾಕ್‌ ಮಾಡಿ, ನಿಗದಿತ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.

– ಅಲ್ಲಿ ಆರ್‌ಟಿ-ಪಿಸಿಆರ್‌ ವಿಧಾನದ ಮೂಲಕ ಆ ಸ್ಯಾಂಪಲ್‌ ಪರೀಕ್ಷೆ ನಡೆಯುತ್ತದೆ. 24 ಗಂಟೆಗಳೊಳಗೆ ಅದರ ವರದಿಯನ್ನು ಸಂಬಂಧಪಟ್ಟ ಕ್ವಾರಂಟೈನ್‌ ಕೇಂದ್ರಕ್ಕೆ ರವಾನಿಸಲಾಗುತ್ತದೆ.

– ಒಂದು ವೇಳೆ ಸಾಮೂಹಿಕ ಸ್ಯಾಂಪಲ್‌ ಪರೀಕ್ಷೆಯ ವರದಿ ಪಾಸಿಟಿವ್‌ ಎಂದು ಬಂದರೆ, ಆಗ ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿಟ್ಟಿರುವ ಪ್ರತಿಯೊಬ್ಬರ ಗಂಟಲು ದ್ರವವನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಮೂಲಕ ಯಾರಿಗೆ ಸೋಂಕು ತಗಲಿದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ.

– ಸಾಮೂಹಿಕ ಪರೀಕ್ಷೆಯ ವರದಿ ನೆಗೆಟಿವ್‌ ಎಂದು ಬಂದರೆ, ಆ ಎಲ್ಲ 25 ಮಂದಿಗೂ ಕೋವಿಡ್ ಸೋಂಕು ತಗಲಿಲ್ಲ ಎಂದು ಅರ್ಥ. ಹಾಗಿದ್ದಾಗ, ಪ್ರತ್ಯೇಕವಾಗಿ ಪರೀಕ್ಷೆ ನಡೆಸುವ ಅನಿವಾರ್ಯತೆ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next