Advertisement

12,000 ಎಕರೆ ಭೂಮಿ ಹಸ್ತಾಂತರಕ್ಕೆ ಸರ್ಕಾರ ಸಿದ್ಧ: ಜಗದೀಶ ಶೆಟ್ಟರ್‌

10:55 PM Jan 25, 2020 | Team Udayavani |

ಬೆಂಗಳೂರು: ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣದಲ್ಲಿ ಭೂಸುಧಾರಣೆ ಕಾಯ್ದೆ ಇಲ್ಲ. ಹಾಗಾಗಿ, ಉದ್ಯಮಿಗಳು ನೇರವಾಗಿ ರೈತರಿಂದ ಭೂಮಿ ಖರೀದಿಸುತ್ತಾರೆ. ನಾವು ಭೂಸುಧಾರಣಾ ಕಾಯ್ದೆಯನ್ನು ತೆಗೆದು ಹಾಕುತ್ತಿಲ್ಲ. ಕಾಯ್ದೆಯ ಕೆಲವು ಸೆಕ್ಷನ್‌ಗಳಲ್ಲಿ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಡಚಣೆಯಾಗಿದ್ದ ನಿರ್ಬಂಧಗಳನ್ನು ಸರಳೀಕರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

Advertisement

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 30,000 ಎಕರೆ ಕಾಯ್ದಿರಿಸುವ ಗುರಿ ಇತ್ತು. ಅದರಂತೆ 12,000 ಎಕರೆ ಭೂಮಿಯನ್ನು ತಕ್ಷಣ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲು ಸರ್ಕಾರ ಸಿದ್ಧವಿದೆ. ಕೈಗಾರಿಕಾ ಉದ್ದೇಶಕ್ಕೆ ಪಡೆದ ಭೂಮಿಯನ್ನು ಬಳಸದಿರುವ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ವರದಿ ಪಡೆದು ಕ್ರಮ ಜರುಗಿಸಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಆರ್ಥಿಕ ಹಿಂಜರಿತ ತಾತ್ಕಾಲಿಕ. ಆಟೋಮೊಬೈಲ್‌ ಸೇರಿದಂತೆ ಆಯ್ದ ವಲಯದಲ್ಲಷ್ಟೇ ಆರ್ಥಿಕ ಹಿಂಜರಿತ ಇದೆ. ಎಲ್ಲ ಕ್ಷೇತ್ರದಲ್ಲೂ ಆ ಪರಿಸ್ಥಿತಿ ಇಲ್ಲ. ಕರ್ನಾಟಕದ ಜಿಡಿಪಿ ಪ್ರಮಾಣ ಸರಾಸರಿ ಶೇ.9ರಷ್ಟಿದ್ದು, ಅದನ್ನೇ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವ್ಯತ್ಯಯವಾಗಿಲ್ಲ ಎಂದು ಪುನರುಚ್ಚರಿಸಿದರು.

ಕೋಲಾರ ಬಳಿ ಕೈಗಾರಿಕೆ!: ಭಾರತ್‌ ಫೋರ್ಜ್‌ ಕಂಪನಿ, ಕೋಲಾರ ಬಳಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಘಟಕ ಸ್ಥಾಪನೆಗೆ ಆಸಕ್ತಿ ತೋರಿದೆ. ಇಸ್ರೋಗೆ ಪೂರಕ ಉಪಕರಣಗಳನ್ನು ತಯಾರಿಸಿ ನೀಡುವ ಘಟಕ ಸ್ಥಾಪನೆಗೆ ಉತ್ಸಾಹ ತೋರಿದ್ದು, ಉತ್ತಮ ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯ ಕಲ್ಪಿಸು ವಂತೆ ಮನವಿ ಮಾಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next