Advertisement

ಹೋಂ ಕ್ವಾರಂಟೈನ್‌ ಮೀರಿದ ಐವರಿಗೆ ಸರ್ಕಾರಿ ಕ್ವಾರಂಟೈನ್‌

08:11 AM May 20, 2020 | Suhan S |

ಧಾರವಾಡ: ಹೋಂ ಕ್ವಾರಂಟೈನ್‌ ಉಲ್ಲಂಘಿಸಿ ಹೊರಗಡೆ ತಿರುಗಾಟ ನಡೆಸಿದ್ದ ಐವರನ್ನು ಮಂಗಳವಾರ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

Advertisement

ಕೋವಿಡ್‌ ಸೋಂಕಿತರೊಂದಿಗೆ ಎರಡನೇ ಹಂತದ (ಸೆಕೆಂಡರಿ) ಸಂಪರ್ಕ ಹೊಂದಿದ್ದ ಜನರನ್ನು ಗುರುತಿಸಿ ಜಿಲ್ಲಾದ್ಯಂತ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಜಿಯೋ ಫೆನ್ಸಿಂಗ್‌ ಅಳವಡಿಸಿ ಇವರೆಲ್ಲರ ಮೇಲೆ ನಿಗಾ ವಹಿಸಲಾಗಿದೆ. ಜಿಯೊ ಫೆನ್ಸಿಂಗ್‌ ವಲಯದಿಂದ ಹೊರಬಂದ ಕೂಡಲೇ ಕಂಟ್ರೋಲ್‌ ರೂಮ್‌ಗೆ ಮಾಹಿತಿ ಲಭ್ಯವಾಗುತ್ತಿದೆ. ಈ ಮಾಹಿತಿ ಆಧರಿಸಿ ನವಲೂರ ಪ್ರದೇಶದಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವರ ಮನೆಗಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ನಿಯಮ ಉಲ್ಲಂಘಿಸದಿರಲು ಎಚ್ಚರಿಕೆ ನೀಡಿದರು.

ಹಲವು ಎಚ್ಚರಿಕೆಗಳ ನಂತರವೂ ನಿರಂತರವಾಗಿ ಹೊರಗಡೆ ಸಂಚಾರ ನಡೆಸಿದ್ದ ಐವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸುಜಾತಾ ಹಸವಿಮಠ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಅಯ್ಯನಗೌಡ ಪಾಟೀಲ ಅವರ ನೇತೃತ್ವದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ತಂಡ ವಶಕ್ಕೆ ಪಡೆದು ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next