Advertisement

ಸಹಕಾರ ಸಂಘದ ಪುಶ್ಚೇತನಕ್ಕೆ ಸರ್ಕಾರದ ಆದ್ಯತೆ

12:26 PM Feb 26, 2018 | Team Udayavani |

ಹುಣಸೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಹಕಾರ ಸಂಘಗಳ ಪುನಶ್ಚೇತನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರಿಂದಾಗಿಯೇ ಸಹಕಾರ ಕ್ಷೇತ್ರವು ಇಂದು ಅಭಿವೃದ್ಧಿ ಪಥದಲ್ಲಿದೆಯೆಂದು ಸಕ್ಕರೆ ಸಚಿವೆ ಗೀತಾ ಮಹದೇವಪ್ರಸಾದ್‌ ತಿಳಿಸಿದರು.

Advertisement

ತಾಲೂಕಿನ ರತ್ನಪುರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಗಳನ್ನು ಉಧಾ^ಟಿಸಿ ಮಾತನಾಡಿದ ಅವರು, ತಮ್ಮ ಪತಿ ಸಹಕಾರ ಸಚಿವರಾಗಿದ್ದ ವೇಳೆ ಕೃಷಿ ಪತ್ತಿನ ಸಹಕಾರ ಸಂಘ, ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ಸೇರಿದಂತೆ ಎಲ್ಲ ರೀತಿಯ ಸಹಕಾರ ಸಂಘಗಳ ಕಟ್ಟಡ ನಿರ್ಮಾಣ ಹಾಗೂ ದುರಸ್ತಿಗೆ ನೆರವು ನೀಡಿದ್ದು,

ಮೈಸೂರು ಜಿಲ್ಲೆಯ 39 ಸಹಕಾರ ಸಂಘಗಳಿಗೆ 3.80 ಕೋಟಿ ರೂ ನೆರವು ನೀಡಿದ್ದಾರೆ. ಸಹಕಾರ ಸಂಘ ಹಾಗು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಶುದ್ಧ ಕುಡಿಯುವ ನೀರಿನ ಘಟಕ, ಮಹಿಳೆಯರ ಸಬಲೀಕರಣಕ್ಕಾಗಿ ಪ್ರಿಯದರ್ಶಿನಿ, ವಿಕಲ ಚೇತನರಿಗೆ ಆಶಾಕಿರಣ ಯೋಜನೆಯನ್ನು ಪ್ರಥಮವಾಗಿ ಜಾರಿಗೆ ತಂದಿದೆ.

ಸಾಲ ಮನ್ನಾ: ಸಹಕಾರ ಸಂಘಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ.ಸಾಲ ಮತ್ತು ಬಡ್ಡಿ ಮನ್ನಾ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದಿದೆ. ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಲು ಉತ್ಪಾದಕರಿಗೆ ಲೀಟರ್‌ ಹಾಲಿಗೆ 5ರೂ. ಪೋ›ತ್ಸಾಹ ಧನ ನೀಡುತ್ತಿದೆ ಎಂದರು.

43 ಕೋಟಿ ಶೂನ್ಯ ಬಡ್ಡಿ ಸಾಲ: ಹುಣಸೂರು ಉಪವಿಭಾಗದ ನಾಲ್ಕು ತಾಲೂಕುಗಳಲ್ಲಿ 969 ಸಹಕಾರ ಸಂಘಗಳಿದ್ದು, 22,039 ಮಂದಿ ಸಹಕಾರಿಗಳಿಗೆ 43 ಕೋಟಿರೂ ಶೂನ್ಯ ಬಡ್ಡಿ ಸಾಲ ವಿತರಿಸಲಾಗಿದೆ. ರತ್ನಪುರಿಯ ಸಂಘದ ಕಟ್ಟಡ ನಿರ್ಮಾಣಕ್ಕೆ 11 ಲಕ್ಷ ರೂ ಸಹಾಯಧನ ನೀಡಿದೆ ಎಂದು ಹೇಳಿ,ರತ್ನಪುರಿ ಸಹಕಾರಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿ,ಮುಂದೆಯೂ ರೈತರ ಅಬ್ಯುಧಯಕ್ಕೆ ಸಹಕಾರ ನೀಡಿರೆಂದು ಸೂಚಿಸಿದರು.

Advertisement

ಸಂಘಕ್ಕೆ ಜೀವ ತುಂಬಿದ ಸಚಿವ: ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಪಿ.ಮಂಜುನಾಥ್‌ ತಾಲೂಕಿನ ಮನುಗನಹಳ್ಳಿ,  ಹುಂಡಿಮಾಳ ಸಂಘಗಳಿಗೆ ವಾಣಿಜ್ಯ ಮಳಿಗೆ ನಿರ್ಮಿಸಲು ತಲಾ 5ಲಕ್ಷ ಬಿಡುಗಡೆಯಾಗಿದೆ. ಬಹುತೇಕ ಸಹಕಾರ ಸಂಘಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಸಚಿವರಾಗಿದ್ದ ಮಹದೇವಪ್ರಸಾದ್‌ ಸಹಕಾರ ಸಂಘಗಳಿಗೆ ಜೀವ ತುಂಬುವ ಮೂಲಕ ನೆರವಾಗಿದ್ದರೆಂದು ಸ್ಮರಿಸಿದರು.

ರತ್ನಪುರಿ ಗ್ರಾಮಕ್ಕೆ 2.75 ಕೋಟಿ ರೂ: ಪುರಾಣ ಪ್ರಸಿದ್ದ ರತ್ನಪುರಿಯ ಆಂಜನೇಯಸ್ವಾಮಿ ದೇವಾಲಯ ಅಭಿವೃದ್ದಿಗೆ 50ಲಕ್ಷ ಮಂಜೂರಾಗಿದ್ದು, ಪ್ರಥಮ ಹಂತದಲ್ಲಿ 5ಲಕ್ಷ, ಗ್ರಾಮದ ಮುಸ್ಲಿಮರ ದರ್ಗಾ ಅಭಿವೃದ್ಧಿಗೆ 10ಲಕ್ಷ, ರತ್ನಪುರಿ ರಸ್ತೆ ಅಗಲಿಕರಣಕ್ಕೆ 2ಕೋಟಿ,

ಸಾರ್ವಜನಿಕ ಸಮುದಾಯ ಭವನಕ್ಕೆ 10ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುವುದಲ್ಲದೆ ರತ್ನಪುರಿ-ಧರ್ಮಾಪುರ ರಸ್ತೆ ಅಭಿವೃದ್ಧಿಗೆ 2.70 ಕೋಟಿ, ಗದ್ದಿಗೆ-ಕರಿಮುದ್ದನಹಳ್ಳಿ-ಬೋಗಾದಿ ರಸ್ತೆ ಅಭಿವೃದ್ಧಿಗೆ 5 ಕೋಟಿ ಹಾಗೂ ಕರಿಮುದ್ದನಹಳ್ಳಿ ಗ್ರಾಮವಿಕಾಸ ಯೋಜನೆಯಡಿ 1 ಕೋಟಿ ರೂ. ಬಿಡುಗಡೆಯಾಗಿದೆ. ತಾಲೂಕಿಗೆ ಮತ್ತೆ 24 ಕೋಟಿರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದರು.

ರತ್ನಪುರಿ ಸಹಕಾರ ಸಂಘದ ಅಧ್ಯಕ್ಷ ನಾಗೇಶ್‌ರಾವ್‌ ಮೆಂಗಾಣಿ ಜಿ.ಪಂ.ಸದಸ್ಯರಾದ ಡಾ.ಪುಷ್ಪ ಅಮರ್‌ನಾಥ್‌, ಸುರೇಂದ್ರ, ಮಾಜಿ ಸದಸ್ಯೆ ಶಿವಗಾಮಿ. ತಾ.ಪಂ.ಸದಸ್ಯರಾದ ಪ್ರಬಾಕರ್‌, ವೆಳ್ಳಂಗಿರಿ,ಪ್ರೇಮೇಗೌಡ ಮಾತನಾಡಿದರು.ಗ್ರಾ.ಪಂ. ಅಧ್ಯಕ್ಷರಾದ ಪುಷ್ಪ, ಸುಮಿತ್ರ, ಮುಖಂಡರಾದ ಸೋಮಶೇಖರ್‌,ಪುಟ್ಟಸ್ವಾಮಿ, ಪಿಡಿ.ಓ. ದೇವರಾಜ್‌ ಹಾಗೂ ಸಂಘದ ಸದಸ್ಯರು,ಸಿ.ಇ.ಓ ರಮೇಶ್‌ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next