Advertisement

Government; ಸಹಕಾರಿ ಸಂಘ ನಾಮನಿರ್ದೇಶನ ಮೀಸಲಾತಿ ಮಸೂದೆಗೆ ಅಂಗೀಕಾರ

12:51 AM Feb 20, 2024 | Team Udayavani |

ಬೆಂಗಳೂರು: ಸರಕಾರದ ನೆರವು ಪಡೆದ ಸಹಕಾರಿ ಸಂಘಗಳ ಮಂಡಳಿಗೆ ಪರಿಶಿಷ್ಟ ಜಾತಿ/ಪಂಗಡ, ಮಹಿಳೆ ಮತ್ತು ಇತರ ಪ್ರವರ್ಗದ ಮೂವರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಸರಕಾರಕ್ಕೆ ನೀಡುವ ಮಸೂದೆ ವಿಧಾಸನಭೆಯಲ್ಲಿ ಅಂಗೀಕಾರ ವಾಗಿದೆ. ಇದುವರೆಗೆ ಸದಸ್ಯರ ಸ್ಪರ್ಧೆಗೆ ಮೀಸಲಾತಿ ಅನ್ವಯವಾಗುತ್ತಿತ್ತು. ಇನ್ನು ನಾಮನಿರ್ದೇಶನದಲ್ಲೂ ಮೀಸಲಾತಿ ಬರಲಿದೆ. ಮಸೂದೆಯನ್ನು ವಿಪಕ್ಷಗಳು, ಸಹಕಾರಿ ಹಿನ್ನೆಲೆಯ ಶಾಸಕರು ತೀವ್ರವಾಗಿ ವಿರೋಧಿಸಿದ್ದರು.

Advertisement

ಸರಕಾರವು ಸಹಕಾರ ಸಂಘಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದೆ. ಸಹಕಾರ ಸಂಘಗಳನ್ನು ಕಾಂಗ್ರೆಸ್‌ ಸಂಘಗಳನ್ನಾಗಿ ಮಾಡಲು ಹೊರಟಿದೆ ಎಂದು ವಿಪಕ್ಷಗಳು ಕಟುವಾಗಿ ಟೀಕಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next