Advertisement

ಕೋವಿಡ್ 19 ಸೋಂಕು ಚಿಕಿತ್ಸೆ: ಖಾಸಗಿ ಆಸ್ಪತ್ರೆ ದರ ನಿಗದಿ ; ಶೇ. 50ರಷ್ಟು ಹಾಸಿಗೆ ಮೀಸಲು

02:59 AM Jun 24, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕು ಪೀಡಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆಗಬಹುದಾದ ಸುಲಿಗೆ ತಪ್ಪಿಸಲು ಸರಕಾರವೇ ದರ ನಿಗದಿಪಡಿಸಿದೆ.

Advertisement

ಜತೆಗೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಆಸ್ಪತ್ರೆ ಕನಿಷ್ಠ ಶೇ. 50ರಷ್ಟು ಹಾಸಿಗೆಗಳನ್ನು ಕೋವಿಡ್ 19 ಸೋಂಕು ಪೀಡಿತರ ಚಿಕಿತ್ಸೆಗಾಗಿ ಮೀಸಲಿಡಬೇಕು ಎಂದು ಮಂಗಳವಾರ ಆದೇಶ ಹೊರಡಿಸಿದೆ.

ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಯೋಜನೆ ಮತ್ತು ಇತರ ಆರೋಗ್ಯ ವಿಮಾ ಸೌಲಭ್ಯ ಹೊಂದಿರುವವರಿಗೆ ಮತ್ತು ನಗದು ಪಾವತಿಸುವ ಎಲ್ಲ ಪ್ರಕಾರದ ರೋಗಿಗಳಿಗೆ ಪ್ರತ್ಯೇಕ ದರ ಅನ್ವಯ ಆಗಲಿದೆ. ಎಬಿ-ಎಆರ್‌ಕೆಯಡಿ ಕಾರ್ಡ್‌ ಪಡೆದವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ.

ಯಾರನ್ನು ಪರಿಗಣಿಸಬೇಕು?
ಬಿಪಿಎಲ್‌, ಎಪಿಎಲ್‌ ಕಾರ್ಡ್‌ದಾರರು, ವಲಸೆ ಕಾರ್ಮಿಕರು, ಅನ್ಯ ರಾಜ್ಯಗಳಿಂದ ವಾಪಸಾದವರು, ಪಡಿತರ ಕಾರ್ಡ್‌ ಇಲ್ಲದವರನ್ನೂ ಪರಿಗಣಿಸಬೇಕು. ಕ್ಲೇಮ್‌ ವಿಲೇಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೋಡಲ್‌ ಏಜೆನ್ಸಿಯಾಗಿರುತ್ತದೆ. ಮಾನ್ಯತೆ ನೀಡದೆ ಇರುವುದು ಶಿಕ್ಷಾರ್ಹ ಅಪರಾಧ ಎಂದು ಆದೇಶ ದಲ್ಲಿ ತಿಳಿಸಲಾಗಿದೆ.

ಕೋವಿಡ್ 19 ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯ ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡು ಬಂದಲ್ಲಿ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಎಚ್ಚರಿಸಿದ್ದಾರೆ.

Advertisement

ತಂದೆ, ಪತ್ನಿ ಮತ್ತು ಪುತ್ರಿಗೆ ಕೋವಿಡ್ 19 ಸೋಂಕು ತಗುಲಿ ಕ್ವಾರಂಟೈನ್‌ನಲ್ಲಿರುವ ಸಚಿವರು ನಿವಾಸದಿಂದಲೇ ಅಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿದ್ದಾರೆ. ಸಂಸ್ಥೆಯ ಮುಖ್ಯಸ್ಥರಿಗೆ ಇದು ಕೊನೆಯ ಎಚ್ಚರಿಕೆ. ಮುಂದೆ ದೂರು ಬಂದ ಸಂಸ್ಥೆಗಳ ಹೊಣೆಯನ್ನು ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ವಹಿಸಲಾಗುವುದು. ಸ್ವಚ್ಛತೆ ಸರಿಯಿಲ್ಲದಿರುವುದಕ್ಕೆ ಸಂಬಂಧಿಸಿ ಅವರು ಈ ಕ್ರಮ ಕೈಗೊಂಡಿದ್ದಾರೆ.

ಜಾಗತಿಕ ಸೋಂಕು ಪೀಡಿತರ ಸಂಖ್ಯೆ : 92,65,757

ಭಾರ ತ (ಸೋಂಕು) : 4,51,515

ಕರ್ನಾಟಕ (ಸೋಂಕು) : 9,721

ಒಟ್ಟು   ಸಾವು (ಜಗತ್ತು): 4,76,343

ಸಾವು (ಭಾರತ) : 14,202

ಚೇತರಿಕೆ : 2,57,835

Advertisement

Udayavani is now on Telegram. Click here to join our channel and stay updated with the latest news.

Next