Advertisement
ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲಿನಲ್ಲಿ ಕರವೇ ಜಿಲ್ಲಾಧ್ಯಕ್ಷ ಶಿವಕುಮಾರ ನಾಟೀಕಾರ ಅವರ 31ನೇ ಜನ್ಮದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಾಮೂಹಿಕ ಮದುವೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತು ನಾವು ಸಮಾಜವನ್ನು ಸರಿಯಾದ ಮತ್ತು ಅರ್ಥಪೂರ್ಣ ಮಾರ್ಗದಲ್ಲಿ ನಡೆಸಬೇಕಿದೆ.
Related Articles
Advertisement
ಆ ಶಕ್ತಿಯನ್ನು ನೀವು ನೀಡಬೇಕು ಎಂದು ಹೇಳಿದರು. ಹವಳಗಾದಲ್ಲಿರುವ ರೇಣುಕಾ ಶುಗರ್ ಮಾಲೀಕರಾದ ವಿದ್ಯಾ ಮೂರಕಂಬಿ ಮಾತನಾಡಿ, ಶಿವಕುಮಾರ ನಾಟೀಕಾರ ಅವರಂತಹ ಯುವಕರಿಂದ ರೈತರಿಗೂ ಹಾಗೂ ಜನ ಸಾಮಾನ್ಯರಿಗೂ ಉತ್ತಮ ಬೆಂಬಲ ಸಿಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ವಿಜಯಕುಮಾರ ಸಾಲಿಮನಿ, ಅಫಜಲಪುರ ತಾಲೂಕಿನ ರಾಜಕಾರಣ ನಿಂತ ನೀರಿನಂತಾಗಿದೆ. ಒಂದೇ ಕುಟುಂಬದ ಪಾಳೆಗಾರಿಕೆ ಕಿತ್ತೂಗೆಯಲು ಸಜ್ಜಾಗಬೇಕು. ಅದಕ್ಕಾಗಿ ಈಗ ಒಬ್ಬ ಸೇನಾಧಿಪತಿ ಸಿಕ್ಕಾಗಿದೆ. ಆದ್ದರಿಂದ ಇನ್ನೂ ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತದೆ.
ಅದಕ್ಕೆ ತಾಲೂಕು ರಾಜಕಾರಣದ ಮತ್ತೂಂದು ಮಗ್ಗಲು ಬದಲಿಸಲಿದೆ ಎಂದು ಹೇಳಿದರು. ಕರವೇ ಜಿಲ್ಲಾಧ್ಯಕ್ಷ ಶೀವುಕುಮಾರ ನಾಟೀಕಾರ 31ನೇ ಜನ್ಮದಿನ ಆಚರಿಸಿಕೊಂಡು ಮಾತನಾಡಿ, ಒಳ್ಳೆಯ ಕೆಲಸ ಮಾಡಲು ಒಳ್ಳೆಯ ಮನಸ್ಸಿರಬೇಕು. ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ನನ್ನ ಒಬ್ಬನ ಸಾಧನೆಯಲ್ಲ.
ಇದರ ಹಿಂದೆ ಕರವೇ ಬಳಗದ ಮತ್ತು ಒಳ್ಳೆಯ ಮನಸ್ಸಿನ ಸಹಸ್ರಾರು ಜನರು ಕೈಜೋಡಿಸಿದ್ದಾರೆ ಎಂದು ಹೇಳಿದರು. ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬಸವಕೇಂದ್ರದ ಸದಸ್ಯರು 42 ಜೋಡಿಗಳಿಗೆ ಶಾಸ್ತೊಕ್ತವಾಗಿ ಮಂತ್ರಗಳ ಪಠಣಮಾಡಿ ಮಾಲಂಗ್ಯ ಧಾರಣೆ ಮಾಡಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ಅಫಜಲಪುರ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಬಡದಾಳದ ಚನ್ನಮಲ್ಲ ಶಿವಾಚಾರ್ಯ, ಮಾಜಿ ಸಚಿವ ಎಂ.ಸಿ. ಮನಗೂಳಿ, ಶಿವಾನಂದ ಶಿವಾಚಾರ್ಯರು, ಮಳಖೇಡ ದರ್ಗಾದ ಸೈಯ್ಯದ್ ಷಾ ಮುಸ್ತಫ್ ಖಾದರಿ, ಮುಖಂಡರಾದ ತಿಪ್ಪಣಪ್ಪ ಕಮಕನೂರ, ಜಿಪಂ ಉಪಾದ್ಯಕ್ಷೆ ಶೋಭಾ ಶಿರಸಗಿ, ಸದಸ್ಯ ಅರುಣಗೌಡ ಪಾಟೀಲ,
ಮತೀನ್ ಪಟೇಲ್, ಮಕೂºಲ್ ಪಟೇಲ್, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಶರಣಪ್ಪ ಮಾನೇಗಾರ, ರಾಜಗೋಪಾಲರೆಡ್ಡಿ ಮುದಿರಾಜ್, ಸೂರ್ಯಕಾಂತ ನಾಕೇದಾರ, ರಾಜು ಬಡದಾಳ, ರಾಜು ಉಕ್ಕಲಿ, ಸಿದ್ದಾರ್ಥ ಬಸರಿಗಿಡ ಇದ್ದರು. ಭಗವಂತರಾಯ ಬೆಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಬಾಪುಗೌಡ ಬಿರಾದಾರ ವಂದಿಸಿದರು. ಸಮಾರಂಭದಲ್ಲಿ 20ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.