ಉಳ್ಳಾಲ: ಮದನಿ ನಗರದಲ್ಲಿ ನಡೆದಿರುವ ಈ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದು, ಅವರ ಸೂಚನೆ ಮೇರೆಗೆ ಪೂರ್ವನಿಯೋಜಿತ ತನ್ನ ಎಲ್ಲ ಕಾರ್ಯ ಕ್ರಮಗಳನ್ನು ರದ್ದುಗೊಳಿಸಿ ಬೆಂಗ ಳೂರಿನಿಂದ ಆಗಮಿಸಿದ್ದೇನೆ. ಮಳೆಗಾಲದಲ್ಲಿ ಇಂತಹ ದುರ್ಘಟನೆ ಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸುತ್ತಿದೆ.
ಸಭಾಧ್ಯಕ್ಷ ಯು.ಟಿ. ಖಾದರ್ ಜತೆಗೆ ಚರ್ಚಿಸಿ ದ.ಕ.ದಲ್ಲಿ ಇಂತಹ ಅಪಾಯಕಾರಿ ಮನೆಗಳನ್ನು ಪ್ರತಿ ಗ್ರಾಮ ಪಂಚಾ ಯತ್ ಮೂಲಕ ಸರ್ವೆ ನಡೆಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮದನಿನಗರ ದುರಂತ ಸ್ಥಳಕ್ಕೆ ಸ್ಪೀಕರ್ ಯು.ಟಿ ಖಾದರ್ ಜತೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗಗಳಲ್ಲಿ ಬೆಟ್ಟಗಳನ್ನು ಕಡಿದು ಮನೆಗಳನ್ನು ನಿರ್ಮಿಸಿರುವುದರಿಂದ ಭೂಕುಸಿತ ಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಮನೆ ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಯೊಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ಸಹಕಾರದಿಂದ ಸರ್ವೇ ನಡೆಸಿ ಭೂಕುಸಿತ ಆಗುವ ಪಾಯಿಂಟ್‌ಗಳನ್ನು ಗುರುತಿಸಲಾ ಗುವುದು. ಅಲ್ಲಿ ತೀವ್ರ ಸ್ವರೂಪದಲ್ಲಿ ಇರುವ ಪಾಯಿಂಟ್‌ಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳು ತ್ತೇವೆ. ತಡೆಗೋಡೆ ಕಟ್ಟಲು ಹೋದರೆ ಮಲೆನಾಡು ಭಾಗದಲ್ಲಿ ಇಡೀ ಗೋಡೆ ಗಳನ್ನೇ ಕಟ್ಟುತ್ತಾ ಹೋಗಬೇಕಿದೆ. ಸದ್ಯ ರಸ್ತೆ ಬದಿಯ ಕುಸಿತಗಳನ್ನು ಗುರುತಿಸಿ ರೂ.70 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಯೋಜನೆ ರೂಪಿಸಲಾಗಿದೆ. ಕಡಲ್ಕೊರೆತಕ್ಕೆ ಕಟ್ಟುವ ಗೋಡೆಗಳೇ ಕೊರೆತಕ್ಕೊಳ ಗಾಗುತ್ತಿವೆ. ಜಾಸ್ತಿ ಕಡಲ್ಕೊರೆತ ಬಾಧಿತ ಪ್ರದೇಶಕ್ಕೆ ಪರಿಹಾರ ಕ್ರಮ ಕೈಗೊಳ್ಳಲು ಸ್ಪೀಕರ್ 80 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.
ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹಿರಿಯ ಕಂದಾಯ ಇಲಾಖೆ ಅಧಿಕಾರಿಗಳಿದ್ದರು.