Advertisement

Government ಯಾವುದೇ ಕೋಮಿನ ಸ್ವತ್ತಲ್ಲ: ಪೇಜಾವರಶ್ರೀ ಅಸಮಧಾನ

11:49 PM Apr 07, 2024 | Vishnudas Patil |

ವಿಜಯಪುರ: ಹನುಮಾನ್ ಚಾಲೀಸಾ ಹಲ್ಲೆಗೊಳಗಾದವನ ಮೇಲೆಯೇ ಸರ್ಕಾರ ಪೊಲೀಸ್ ಪ್ರಕರಣ ದಾಖಲಿಸಿದೆ. ಸರ್ಕಾರ ಎಂದರೆ ಯಾವುದೇ ಒಂದು ಕೋಮಿನ ಸ್ವತ್ತಲ್ಲ ಎಂದು ಪೇಜಾವರ ಮಠಾಧೀಶರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಗುಂಪಾದರೂ ಸರಿ ಸರಿ ಸರ್ಕಾರ ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿ ಇದ್ದವರ ಹಾಗೂ ಸರ್ಕಾರದ ಕರ್ತವ್ಯವೂ ಹೌದು ಎಂದರು.ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕದೆ ಎಲ್ಲ ಸಮಾಜಗಳನ್ನು ಒಟ್ಟಾಗಿ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ಅಯೋಧ್ಯೆಯ ರಾಮ ಮಂದಿರದ ಬಾಲರಾಮ ದರ್ಶನಕ್ಕೆ ನಿತ್ಯವೂ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿತ್ಯವೂ ಲಕ್ಷಾಂತರ ಭಕ್ತರು ರಾಮನ ದರ್ಶನಕ್ಕೆ ಬರುತ್ತಿರುವ ಕಾರಣ ಸಮಸ್ಯೆ ಆಗುತ್ತಿದೆ. ರಾಮನವಮಿ ದಿನ ಭಕ್ತರು ಅಯೋಧ್ಯೆಗೆ ಭೇಟಿ ನೀಡದೇ ತಮ್ಮ ತಮ್ಮ ಗ್ರಾಮ, ಮನೆಗಳಲ್ಲೇ ರಾಮ ನವಮಿ ಆಚರಿಸುವಂತೆ ಭಕ್ತರಿಗೆ ಸಲಹೆ ನೀಡಿದರು‌

Advertisement

Udayavani is now on Telegram. Click here to join our channel and stay updated with the latest news.

Next